ಅಪ್ರಾಪ್ತ ಸಂತ್ರಸ್ತರ ಗುರ್ತಿಕೆ ಬಹಿರಂಗ; ರಾಹುಲ್ ಗಾಂಧಿಗೆ ನೋಟಿಸ್ ಜಾರಿ

ದೌರ್ಜನ್ಯಕ್ಕೊಳಗಾಗಿದ್ದ ಅಪ್ರಾಪ್ತ ಇಬ್ಬರು ಬಾಲಕರ ಗುರ್ತಿಕೆಯನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಮಹಾರಾಷ್ಟ್ರ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಬುಧವಾರ ನೋಟಿಸ್ ಜಾರಿ ಮಾಡಿದೆ...
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಮುಂಬೈ: ದೌರ್ಜನ್ಯಕ್ಕೊಳಗಾಗಿದ್ದ ಅಪ್ರಾಪ್ತ ಇಬ್ಬರು ಬಾಲಕರ ಗುರ್ತಿಕೆಯನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಮಹಾರಾಷ್ಟ್ರ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಬುಧವಾರ ನೋಟಿಸ್ ಜಾರಿ ಮಾಡಿದೆ. 
ಅಪ್ರಾಪ್ತ ಬಾಲಕರ ಗುರ್ತಿಕೆಯನ್ನು ರಾಹುಲ್ ಗಾಂಧಿಯವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ ಹಿನ್ನಲೆಯಲ್ಲಿ ಮುಂಬೈ ನಿವಾಸಿಯಾಗಿರುವ ಅಮೋಲ್ ಜಾಧವ್ ಎಂಬುವವರು ರಾಹುಲ್ ಗಾಂಧಿ ಹಾಗೂ ಟ್ವಿಟ್ಟರ್ ವಿರುದ್ಧ ದೂರು ನೀಡಿದ್ದರು. 
ದೂರಿನ ಹಿನ್ನಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಮಕ್ಕಳ ರಕ್ಷಣಾ ಆಯೋಗ ರಾಹುಲ್ ಗಾಂಧಿ ಹಾಗೂ ಟ್ವಿಟರ್'ಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ. 
ಆಯೋಗದ ಅಧ್ಯಕ್ಷ ಪ್ರವೀಣ್ ಘುಗೆ ಅವರು ಮಾತನಾಡಿ, ಪ್ರಕರಣ ಸಂಬಂಧ ರಾಹುಲ್ ಗಾಂಧಿ ಹಾಗೂ ಟ್ಟಿಟ್ಟರ್'ಗೆ ನೋಟಿಸ್ ಮಾಡಲಾಗಿದ್ದು, ಪ್ರತಿಕ್ರಿಯೆ ನೀಡುವಂತೆ ಕೇಳಲಾಗಿದೆ ಎಂದು ಹೇಳಿದ್ದಾರೆ. 
ನೋಟಿಸ್ ನಲ್ಲಿ ಅಪ್ರಾಪ್ತ ನ್ಯಾಯ ಕಾಯ್ದೆ 2015 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ 2012 ಕಾಯ್ದೆಗಳ ಅಡಿಯಲ್ಲಿ ನಿಮ್ಮ ವಿರುದ್ಧವೇಕೆ ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್ ನಲ್ಲಿ ಕೇಳಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, 10 ದಿನಗಳೊಳಗಾಗಿ ಪ್ರತಿಕ್ರಿಯೆ ನೀಡವಂತೆಯೂ ಕೇಳಲಾಗಿದೆ ಎಂದು ವರದಿಗಳು ತಿಳಿಸಿವೆ. 
ಭಾರತೀಯ ಕಾನೂನಿನ ಪ್ರಕಾರ ಅಪ್ರಾಪ್ತ ಸಂತ್ರಸ್ತರ ಗುರ್ತಿಕೆಗಳನ್ನು ಬಹಿರಂಗ ಪಡಿಸಬಾರದು. 
ಅಪ್ರಾಪ್ತ ಬಾಲಕರಿಬ್ಬರನ್ನು ನಗ್ನಗೊಳಿಸಿದ್ದ ಗ್ರಾಮವೊಂದು ಬಾಲಕರಿಗೆ ಥಳಿಸಿತ್ತು. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಿಲ್ಲಿ ವೈರಲ್ ಆಗಿತ್ತು. ಘಟನೆಗೆ ಸಾಕಷ್ಟು ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗಿದ್ದವು. 
ಪ್ರಕರಣ ಸಂಬಂಧ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿಯವರು ವಿಡಿಯೋವನ್ನು ಹಂಚಿಕೊಂಡು, ಹಿಂದಿಳಿದ ಜನರ ವಿರುದ್ಧ ಬಿಜೆಪಿ ಹಾಗೂ ಆರ್'ಎಸ್ಎಸ್ ದೌರ್ಜನ್ಯವೆಸಗುತ್ತಿದೆ ಎಂದು ಆರೋಪಿಸಿದ್ದರು. 
ನೋಟಿಸ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಸಂಜಯ್ ನಿರುಪಮ್ ಅವರು, ನೋಟಿಸ್ ಅಸಂಬದ್ಧವಾದದ್ದು ಎಂದು ಹೇಳಿದ್ದಾರೆ. 
ನೋಟಿಸ್ ಅಸಂಬದ್ಧವಾದದ್ದು. ನಿಜಕ್ಕೂ ನೋಟಿಸ್ ಜಾರಿಯಾಗಬೇಕಿರುವುದು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ. ಏಕೆಂದರೆ, ಮಕ್ಕಳ ಗೌರವ ಹಾಗೂ ಹಕ್ಕುಗಳನ್ನು ಕಾಪಾಡುವಲ್ಲಿ ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆ. ರಾಹುಲ್ ಗಾಂಧಿಯವರು ರಾಜ್ಯ ಪರಿಸ್ಥಿತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com