ಮಾಜಿ ಪತ್ನಿ ಮೇಲಿನ ದ್ವೇಷಕ್ಕೆ ನವಜಾತ ಶಿಶುವನ್ನು ಬರ್ಬರವಾಗಿ ಹತ್ಯೆ ಮಾಡಿದ ಕ್ರೂರಿ!

ಮಾಜಿ ಪತ್ನಿಯ ಮೇಲಿನ ದ್ವೇಷ ಮೂರು ವಾರಗಳ ನವಜಾತ ಶಿಶು ಹತ್ಯೆಗೆ ಕಾರಣವಾಗಿದೆ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಗುವಾಹಟಿ: ಮಾಜಿ ಪತ್ನಿಯ ಮೇಲಿನ ದ್ವೇಷ ಮೂರು ವಾರಗಳ ನವಜಾತ ಶಿಶು ಹತ್ಯೆಗೆ ಕಾರಣವಾಗಿದೆ. 
ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಲ್ಲಿರುವ ಮಾಜಿ ಪತ್ನಿಯ ಮನೆಗೆ ಬಂದ ಗಂಡ ಆಕೆಯ ಜತೆ ಜಗಳವಾಡಿದ್ದಾನೆ. ನಂತರ ಆಕೆಯನ್ನು ಥಳಿಸಿದ್ದಾನೆ. ಮೊದಲೇ ಆಪರೇಷನ್ ಮಾಡಿಸಿಕೊಂಡಿದ್ದರಿಂದ ಆಕೆ ಪ್ರಜ್ಞೆ ತಪ್ಪಿದ್ದಾಳೆ. ಆಗ ಅಲ್ಲೆ ಮಲಗಿದ್ದ ಮಗುವನ್ನು ಎತ್ತಿಕೊಂಡು ಅದರ ಅಂಗಾಂಗಳನ್ನು ಮುರಿದು ಹಾಕಿದ್ದಾನೆ. ಇದರಿಂದ ಮಗು ನೋವಿನಿಂದ ಅತ್ತಿದ್ದರಿಂದ ತೆಗೆದುಕೊಂಡು ಹೋಗಿ ನೀರಿನ ಬಕೆಟ್ ನಲ್ಲಿ ಮುಳುಗಿಸಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. 
ಆರೋಪಿಯನ್ನು ಕ್ಲಾರೆನ್ಸ್ ಜಾಸನ್ ರಾಜೇ ಎಂದು ಗುರುತಿಸಲಾಗಿದ್ದು ಆತನನ್ನು ಹಿಡಿದು ಚನ್ನಾಗಿ ಥಳಿಸಿದ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಅಪಹರಣ ಪ್ರಕರಣ ಸಂಬಂಧ ಜೈಲು ಶಿಕ್ಷೆ ಅನುಭವಿಸುತ್ತಿದ್ದು ಬೇಲ್ ಮೇಲೆ ಹೊರಬಂದಿದ್ದ. ಮಾಜಿ ಪತ್ನಿಯ ಹಾಗೂ ಆರೋಪಿಗೆ ನಾಲ್ಕು ವರ್ಷದ ಮಗುವಿದೆ. 
ಯಾವ ಕಾರಣಕ್ಕೆ ಆರೋಪಿ ಮಗುವನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿಲ್ಲ. ಸದ್ಯ ಆತನ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com