ಜೂ.21 ರಂದು ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಗಣ್ಯರು ಭಾಗವಹಿಸಿದ್ದು, ಯೋಗಾಭ್ಯಾಸ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಸೇರಿದಂತೆ ಬಾಲಿವುಡ್ ನ ನಟಿಯರು ಯೋಗಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟಿ ರಾಖಿ ಸಾವಂತ್ ಸಹ ಯೋಗಾಭ್ಯಾಸ ಮಾಡಿದ್ದು, ಟ್ವೀಟಿಗರು ಮಾತ್ರ ರಾಖಿ ಸಾವಂತ್ ಯೋಗಾಸವನ್ನು ಟೀಕಿಸಿದ್ದಾರೆ. ಯೋಗಾಭ್ಯಾಸಕ್ಕೆ ಪೂರಕವಾದ ಉಡುಗೆ ತೊಟ್ಟು ಯೋಗಾಭ್ಯಾಸ ಮಾಡುವವರ ನಡುವೆ ಸ್ವಿಮ್ ಸೂಟ್ ಧರಿಸಿ ಯೋಗಾಭ್ಯಾಸ ಮಾಡಿರುವುದಕ್ಕೆ ಟ್ವಿಟರ್ ನಲ್ಲಿ ಟ್ರಾಲ್ ಮಾಡಲಾಗುತ್ತಿದೆ.
ಸ್ವಿಮ್ ಸೂಟ್ ಧರಿಸಿ ಯೋಗ ಮಾಡಿರುವ ರಾಖಿ ಸಾವಂತ್ ಗೆ "ನೀವು ಸ್ವಿಮ್ ಮಾಡುತ್ತಿದ್ದೀರೋ ಅಥವಾ ಯೋಗ ಮಾಡುತ್ತಿದ್ದೀರೋ"? ಎಂದು ಟ್ವೀಟಿಗರು ಪ್ರಶ್ನೆ ಮಾಡಿದ್ದಾರೆ.