

ರಾಂಚಿ: ಆರ್ ಜೆಡಿ ವರಿಷ್ಠ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಜಾಮೀನು ಅವಧಿಯನ್ನು ಜುಲೈ 3ರವರೆಗೂ ತಾತ್ಕಾಲಿಕವಾಗಿ ವಿಸ್ತರಿಸಿ ರಾಂಚಿ ಹೈಕೋರ್ಟ್ ವಿಸ್ತರಿಸಿದೆ.
ಮೇವು ಹಗರಣಕ್ಕೆ ಸಂಬಂಧಿಸಿದಂತೆ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ 69 ವರ್ಷದ ಲಾಲು ಪ್ರಸಾದ್ ಯಾದವ್ ಹಾಗೂ ಇತರ 18 ಆರೋಪಿಗಳನ್ನು ನ್ಯಾಯಾಲಯ ಜೈಲಿಗೆ ಅಟ್ಟಿತ್ತು.
ಪುತ್ರ ತೇಜ್ ಪ್ರತಾಪ್ ಯಾದವ್ ಮದುವೆಯಲ್ಲಿ ಭಾಗವಹಿಸುವುದಕ್ಕಾಗಿ ಮೇ ತಿಂಗಳಲ್ಲಿ ಮೂರು ದಿನಗಳ ಪೆರೋಲ್ ಪಡೆದಿದ್ದ ಲಾಲು ಪ್ರಸಾದ್ ಯಾದವ್ , ಅನಾರೋಗ್ಯದ ಹಿನ್ನೆಲೆಯಲ್ಲಿ ಆರು ವಾರಗಳ ತಾತ್ಕಾಲಿಕ ಜಾಮೀನು ಪಡೆದಿದ್ದರು.
ಆದರೆ, ಜಾಮೀನು ಅವಧಿ ಮುಗಿದಿದ್ದರಿಂದ ಅನಾರೋಗ್ಯ ಹಿನ್ನೆಲೆಯಲ್ಲಿ ಮತ್ತೆ ಜಾಮೀನು ಅವಧಿಯನ್ನು ವಿಸ್ತರಿಸಬೇಕೆಂದು ಲಾಲು ಪ್ರಸಾದ್ ಯಾದವ್ ಪರ ನ್ಯಾಯಾಧೀಶರು ಕೋರ್ಟಿಗೆ ಮನವಿ ಮಾಡಿಕೊಂಡಿದ್ದರು.
ರಕ್ತದೊತ್ತಡ, ಹೃದಯ, ಮೂತ್ರಪಿಂಡ ಮತ್ತು ಖಿನ್ನತೆ ಸೇರಿದಂತೆ ಅನೇಕ ಗಂಭೀರ ರೋಗಗಳಿಗೆ ಹೋರಾಡುತ್ತಿದ್ದಾರೆ. ಅವರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲು ಜಾಮೀನು ಅವಧಿಯನ್ನು ವಿಸ್ತರಿಸಬೇಕೆಂದು ಸುಪ್ರೀಂಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಲಾಲು ಪ್ರಸಾದ್ ಯಾದವ್ ಪರ ವಾದ ಮಂಡಿಸಿದರು.
ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾಮೀನು ಅವಧಿ ವಿಸ್ತರಿಸಿ ತೀರ್ಪು ತೀರ್ಪು ಪ್ರಕಟಿಸಿತು.