ಪಾಟ್ನಾ: ತೋಟದಲ್ಲಿ ಮಾವಿನ ಹಣ್ಣು ಕಿತ್ತಿದ್ದಕ್ಕೆ 12 ವರ್ಷದ ಬಾಲಕನನ್ನು ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಬಿಹಾರದ ಗೊಗ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ..ಬಾಲಕ ಶೇರ್ ಗ್ರಾ ಗ್ರಾಮದಲ್ಲಿ ಬೇರೆ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಈ ವೇಳೆ ಪಕ್ಕದಲ್ಲಿದ್ದ ಹಣ್ಣಿನ ತೋಟಕ್ಕೆ ತೆರಳಿ ಮರದಿಂದ ಮಾವಿನ ಹಣ್ಣುಗಳನ್ನು ಕಿತ್ತಿದ್ದಾನೆ,. .ಇದನ್ನು ನೋಡಿದ ವ್ಯಕ್ತಿ ಕೋಪಗೊಂಡು ಬಾಲಕನ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ, ನಂತರ ಅಲ್ಲಿಂದ ಆರೋಪಿ ಪರಾರಿಯಾಗಿದ್ದಾನೆ..ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಖಾಗರಿಯಾ ಸದರ್ ಆಸ್ಪತ್ರೆಯಲ್ಲಿಡಲಾಗಿದೆ. .ಪೊಲೀಸರು ಶಂಕಿತ ವ್ಯಕ್ತಿಯ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆರೋಪಿಗಾಗಿ ಶೋಧ ನಡೆಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics