ಉತ್ತರಾಖಂಡದಲ್ಲಿ ಎಲ್ಲ ರೀತಿಯ ಜಲಕ್ರೀಡೆಗೆ ನಿಷೇಧ ಹೇರಿದ ಹೈಕೋರ್ಟ್!

ದೈವನಾಡು ಉತ್ತರಾಖಂಡದಲ್ಲಿ ಇನ್ನು ಮುಂದೆ ಎಲ್ಲ ರೀತಿಯ ಜಲ ಕ್ರೀಡೆಗಳನ್ನು ನಿಷೇಧಿಸಿ ಆ ರಾಜ್ಯದ ಹೈಕೋರ್ಟ್ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನೈನಿಟಾಲ್: ದೈವನಾಡು ಉತ್ತರಾಖಂಡದಲ್ಲಿ ಇನ್ನು ಮುಂದೆ ಎಲ್ಲ ರೀತಿಯ ಜಲ ಕ್ರೀಡೆಗಳನ್ನು ನಿಷೇಧಿಸಿ ಆ ರಾಜ್ಯದ ಹೈಕೋರ್ಟ್ ಆದೇಶ ಹೊರಡಿಸಿದೆ.
ಜೂನ್ 18ರಂದು ನಡೆದಿದ್ದ ವಿಚಾರಣೆಯ ಮುಂದುವರಿದ ಭಾಗವಾಗಿ ವಿಚಾರಣೆ ನಡೆಸಿದ ಉತ್ತರಾಖಂಡ ಹೈಕೋರ್ಟ್ ಜಲಕ್ರೀಡೆಗಳಾದ ರ್ಯಾಫ್ಚಿಂಗ್, ಬೋಟಿಂಗ್, ಪ್ಯಾರಾ ಗ್ಲೈಡಿಂಗ್ ನಂತಹ ಜಲ ಕ್ರೀಡೆಗಳ ಮೇಲೆ ನಿಷೇಧ ಹೇರಿದೆ. ಅಲ್ಲದೆ ಈ ಸಂಬಂಧ ಉತ್ತರಾಖಂಡ ಸರ್ಕಾರಕ್ಕೆ 2 ವಾರಗಳ ಗಡುವು ನೀಡಿದ್ದು, ಸಂಬಂಧ ಕರಡು ಮತ್ತು ಪಾರದರ್ಶಕ ನೀತಿ ರಚಿಸುವಂತೆ ಆದೇಶ ನೀಡಿದೆ. 
ಅಂತೆಯೇ ಪ್ರವಾಸೋಧ್ಯಮದ ನಿಟ್ಟಿನಲ್ಲಿ ಅತ್ಯಂತ ಅನುಭವ ಹೊಂದಿರುವ ತಜ್ಞರಿಗೆ ಮಾತ್ರ ರ್ಯಾಫ್ಟಿಂಗ್ ಅನುಮತಿ ನೀಡುವಂತೆಯೂ ಕೋರ್ಟ್ ಆದೇಶ ನೀಡಿದೆ. ಯಾವುದೇ ಜಲಕ್ರೀಡೆ ದುರಂತದಲ್ಲಿ ಅಂತ್ಯವಾಗುವುದಕ್ಕೆ ಕೋರ್ಟ್ ಅನುಮತಿ ನೀಡುವುದಿಲ್ಲ. ಪ್ರತೀ ವರ್ಷ ರ್ಯಾಫ್ಟಿಂಗ್ ವೇಳೆಯಲ್ಲಿನ ದುರಂತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ನದಿ ತಡದಲ್ಲೇ ಕ್ಯಾಂಪ್ ಗೆ ಅನುಮತಿ ಕೊಟ್ಟಿರುವುದು ನಿಜಕ್ಕೂ ನಮಗೆ ಆಘಾತವನ್ನುಂಟು ಮಾಡಿದೆ. ಇಂತಹ ಕ್ಯಾಂಪ್ ಗಳಿಂದ ನದಿ ಕಲುಷಿತವಾಗುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿಗಳಾದ ರಾಜೀವ್ ಶರ್ಮಾ ಮತ್ತು ಲೋಕ್ ಪಾಲ್ ಸಿಂಗ್ ನೇತೃತ್ವದ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಅಂತೆಯೇ ನದಿ ದಡದಲ್ಲಿ ವಾಹನಗಳ ಬಳಕೆ ಮೇಲೂ ಕೋರ್ಟ್ ನಿಷೇಧ ಹೇರಿದೆ.
ಇನ್ನು ನದಿ ದಡದಲ್ಲಿ ನಡೆಯುತ್ತಿರುವ ಅಕ್ರಮ ರ್ಯಾಫ್ಟಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ನಿಂದಾಗಿ ನದಿ ಕಲುಷಿತವಾಗುತ್ತಿದ್ದು, ಇದರಿಂದ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಅಲ್ಲದೆ ಗಂಗಾನದಿಯ ಪಾವಿತ್ರ್ಯತೆ ಹಾಳಾಗುತ್ತಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com