ಸ್ಟೆರ್ಲೈಟ್ ಘಟಕದಿಂದ 1, 300 ಟನ್ ಸಲ್ಫರಿಕ್ ಆಸಿಡ್ ತೆರವು: ತೂತುಕುಡಿ ಜಿಲ್ಲಾಧಿಕಾರಿ

ವೇದಾಂತ ಗ್ರೂಪ್ ನ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕದಲ್ಲಿ ಸಲ್ಫರಿಕ್ ಆಸಿಡ್ ಸೋರಿಕೆಯಾಗುತ್ತಿರುವುದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತೂತುಕುಡಿ: ವೇದಾಂತ ಗ್ರೂಪ್ ನ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕದಲ್ಲಿ ಸಲ್ಫರಿಕ್ ಆಸಿಡ್ ಸೋರಿಕೆಯಾಗುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ 1,300 ಟನ್ ಆಸಿಡ್ ಅನ್ನು ಘಟಕದ ಆವರಣದಿಂದ ತೆರವುಗೊಳಿಸಲಾಗಿದೆ ಎಂದು ತೂತುಕುಡಿ ಜಿಲ್ಲಾಧಿಕಾರಿ ಶನಿವಾರ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಸಂದೀಪ್ ನಂದೂರಿ ಅವರು, ಒಟ್ಟು 75 ಟ್ಯಾಂಕರ್ ಗಳ ಮೂಲಕ 1300 ಟನ್ ಸಲ್ಫರಿಕ್ ಆಸಿಡ್ ಅನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಜೂನ್ 17ರಂದು ತೂತುಕುಡಿಯ ತಾಮ್ರ ಸಂಸ್ಕರಣಾ ಘಟಕದಲ್ಲಿ ಆಸಿಡ್ ಸೋರಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಇದು ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿತ್ತು.
ಈ ಸಂಬಂಧ ಮದ್ರಾಸ್‌ ಹೈಕೋರ್ಟ್ ಗೆ ದಾವೆ ಸಲ್ಲಿಸಿದ್ಗ ವೇದಾಂತ ಸಂಸ್ಥೆ, ಸೋರಿಕೆಯನ್ನು ನಿಯಂತ್ರಿಸಲು ವಿದ್ಯುತ್‌ ಮರುಸಂಪರ್ಕಗೊಳಿಸಬೇಕು ಎಂದು ಕೋರಿತ್ತು. ಆದರೆ ಸೋರಿಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ತೂತುಕುಡಿ ಜಿಲ್ಲಾಡಳಿತ ವಾದಿಸಿತ್ತು.
ಹಿಂಸಾತ್ಮಕ ಪ್ರತಿಭಟನೆಯ ನಂತರ ತಮಿಳುನಾಡು ಸರ್ಕಾರ ತೂತುಕುಡಿಯ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ಶಾಶ್ವತವಾಗಿ ಮುಚ್ಚಲು ತಮಿಳುನಾಡು ಸರ್ಕಾರ ಆದೇಶಿಸಿತ್ತು. ಅಲ್ಲದೆ ಘಟಕಕ್ಕೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿತ್ತು.
ಮೇ.22 ರಂದು ತೂತುಕುಡಿಯಲ್ಲಿ ಸ್ಟೆರ್ಲೈಟ್ ತಾಮ್ರ ಘಟಕದ ಕಾರ್ಯನಿರ್ವಹಣೆಯನ್ನು ವಿರೋಧಿಸಿ ರೈತರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ನಡೆದ ಪೊಲೀಸ್‌ ಗೋಲಿಬಾರ್ ನಲ್ಲಿ 13 ಮಂದಿ ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com