ಸಂಗ್ರಹ ಚಿತ್ರ
ದೇಶ
ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ 21 ಕಾಶ್ಮೀರಿ ಉಗ್ರರು: ಸೇನೆಯಿಂದ ಕಾರ್ಯಾಚರಣೆ ಆರಂಭ
ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸಮರ ಸಾರಿರುವ ಭಾರತೀಯ ಸೇನೆ, ಇದೀಗ ರಾಜ್ಯದಲ್ಲಿ ಸಕ್ರಿಯರಾಗಿರುವ ವಿವಿಧ ಉಗ್ರ ಸಂಘಟನೆಗಳಿಗೆ ಸೇರಿದ ಒಟ್ಟು 21 ಉಗ್ರರ ಪಟ್ಟಿಯೊಂದನ್ನು ಸಿದ್ಧಪಡಿಸಿದೆ...
ಜಮ್ಮು: ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸಮರ ಸಾರಿರುವ ಭಾರತೀಯ ಸೇನೆ, ಇದೀಗ ರಾಜ್ಯದಲ್ಲಿ ಸಕ್ರಿಯರಾಗಿರುವ ವಿವಿಧ ಉಗ್ರ ಸಂಘಟನೆಗಳಿಗೆ ಸೇರಿದ ಒಟ್ಟು 21 ಉಗ್ರರ ಪಟ್ಟಿಯೊಂದನ್ನು ಸಿದ್ಧಪಡಿಸಿದೆ.
ಪಟ್ಟಿಯಲ್ಲಿರುವ 21 ಉಗ್ರರನ್ನು ಶೀಘ್ರಗತಿಯಲ್ಲಿ ಸೆರೆಹಿಡಿಯುವ ಇಲ್ಲವೇ ಹತ್ಯೆ ಮಾಡುವ ಮೂಲಕ ರಾಜ್ಯದಲ್ಲಿ ಮತ್ತೆ ಶಾಂತಿ ಸ್ಥಾಪನೆ ಮಾಡುವ ಗುರಿಯನ್ನು ಸೇನೆ ಹೊಂದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
21 ಉಗ್ರರ ಪೈಕಿ ಜೂ.22ರಂದು ಅನಂತ್ ನಾಗ್ ಜಿಲ್ಲೆಯಲ್ಲಿ ಸೇನೆ ನಡೆಸಿದ್ದ ಎನ್ ಕೌಂಟರ್ ನಲ್ಲಿ ಓರ್ವ ಉಗ್ರರನ್ನು ಹತ್ಯೆ ಮಾಡಲಾಗಿದೆ. ಇದರೊಂದಿಗೆ ಪಟ್ಟಿಯಲ್ಲಿ 20 ಉಗ್ರರು ಮಾತ್ರ ಉಳಿದುಕೊಂಡಂತೆ ಆಗಿದೆ.
ಸೇನೆ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ 11, ಲಷ್ಕರ್-ಇ-ತೊಯ್ಬಾದ 6, ಜೈಶ್-ಇ-ಮೊಹಮ್ಮದ್ ಸಂಘಟನೆಯ ಇಬ್ಬರು, ಅನ್ಸರ್ ಫಜ್ವಾತ್ ಉಲ್ ಹಿಂದ್'ನ ಒಬ್ಬ ಉಗ್ರ ಸೇರಿದ್ದಾನೆಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ