ಬಂಧನಕ್ಕೊಳಗಾಗಿರುವ ಮಹಿಳೆ
ದೇಶ
ಕಪ್ಪಗಿದ್ದಾಳೆಂದು ಲೇವಡಿ: ಸಮಾರಂಭಕ್ಕೆ ಬಂದಿದ್ದ ಸಂಬಂಧಿಕರಿಗೆ ವಿಷ ಹಾಕಿದ ಮಹಿಳೆ; 5 ಸಾವು, 80 ಮಂದಿ ಅಸ್ವಸ್ಥ
ಕಪ್ಪಗಿದ್ದಾಳೆಂದು ತಮಾಷೆ ಮಾಡಿದ ಕಾರಣಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡ ಮಹಿಳೆಯೊಬ್ಬರು ಸಮಾರಂಭಕ್ಕೆ ಬಂದಿದ್ದ ಸಂಬಂಧಿಕರಿಗೆ ಆಹಾರದಲ್ಲಿ ವಿಷ ಹಾಕಿದ್ದು, ಪರಿಣಾಮ ನಾಲ್ವರು ಮಕ್ಕಳು ಸೇರಿ ಐವರು ಸಾವನ್ನಪ್ಪಿ...
ರಾಯಗಢ: ಕಪ್ಪಗಿದ್ದಾಳೆಂದು ತಮಾಷೆ ಮಾಡಿದ ಕಾರಣಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡ ಮಹಿಳೆಯೊಬ್ಬರು ಸಮಾರಂಭಕ್ಕೆ ಬಂದಿದ್ದ ಸಂಬಂಧಿಕರಿಗೆ ಆಹಾರದಲ್ಲಿ ವಿಷ ಹಾಕಿದ್ದು, ಪರಿಣಾಮ ನಾಲ್ವರು ಮಕ್ಕಳು ಸೇರಿ ಐವರು ಸಾವನ್ನಪ್ಪಿ, 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಮಹಾರಾಷ್ಟ್ರ ರಾಯ್ಗಢದಲ್ಲಿ ನಡೆದಿದೆ.
ಘಟನೆ ಜೂನ್.18ರಂದು ಘಟನೆ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಜ್ಞಾ ಸರ್ವಾಸೆ ಆಹಾರಕ್ಕೆ ವಿಷ ಹಾಕಿದ ಮಹಿಳೆ ಎಂದು ಗುರ್ತಿಸಲಾಗಿದೆ.
ರಾಯ್ಗಢದಲ್ಲಿರುವ ಮಹದ್ ಗ್ರಾಮದಲ್ಲಿ ಸುಭಾಷ್ ಮನೆ ಎಂಬುವವರ ಕುಟುಂಬದ ಮನೆ ಎಂಬುವವರ ಮನೆಯಲ್ಲಿ ಸಮಾರಂಭವೊಂದು ನಡೆಯುತ್ತಿತ್ತು. ಸಮಾರಂಭಕ್ಕೆ ಆಗಮಿಸಿದ್ದ ಪ್ರಜ್ಞಾಳನ್ನು, ಕೆಲ ಸಂಬಂಧಿಕರು ಆಕೆಯ ಕಪ್ಪು ವರ್ಣ ಕುರಿತು ಲೇವಡಿ ಮಾಡಿದ್ದಾರೆ.
ಇದರಿಂದ ತೀವ್ರವಾಗಿ ಕೋಪಗೊಂಡಿರುವ ಪ್ರಜ್ಞಾ ಸಮಾರಂಭದಲ್ಲಿ ತಯಾರಿಸಲಾಗಿದ್ದ ಆಹಾರಕ್ಕೆ ವಿಷ ಹಾಕಿದ್ದಾಳೆ. ಪರಿಣಾಮ ವಿಷಾಹಾರ ಸೇವಿಸಿ ನಾಲ್ವರು ಮಕ್ಕಳು, ಓರ್ವ ವೃದ್ಧ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ 80 ಮಂದಿ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಮಹಿಳೆಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಕುಟುಂಬ ಕಲಹದಿಂದಾಗಿ ಆಹಾರಕ್ಕೆ ವಿಷ ಹಾಕಿದ್ದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ. ಘಟನೆಯಲ್ಲಿ 120 ಮಂದಿ ಅಸ್ವಸ್ಥರಾಗಿದ್ದು, ಐವರು ಸಾವನ್ನಪ್ಪಿದ್ದಾರೆಂದು ರಾಯ್ಗಢ ಎಸ್'ಪಿ ಅನಿಲ್ ಪರಸ್ಕರ್ ಅವರು ತಿಳಿಸಿದ್ದಾರೆ.


