ಗೋಮತಿ ನದಿ ದಂಡೆಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಆದಿತ್ಯನಾಥ್ ಚಾಲನೆ

ಗೋಮತಿ ನದಿ ದಂಡೆಯಲ್ಲಿ ಇಂದು ಸ್ವಚ್ಛತಾ ಕಾರ್ಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಾಲನೆ ನೀಡಿದರು.ಮುಖ್ಯಮಂತ್ರಿ ಜೊತೆಗೆ ಸಚಿವರು, ಅನೇಕ ಶಾಸಕರು ಹಾಗೂ ಮೇಯರ್ ಪಾಲ್ಗೊಂಡು ನದಿ ದಂಡೆ ಸ್ವಚ್ಛಗೊಳಿಸಿದರು.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
ಲಖನೌ: ಗೋಮತಿ ನದಿ ದಂಡೆಯಲ್ಲಿ ಇಂದು ಸ್ವಚ್ಛತಾ ಕಾರ್ಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಾಲನೆ ನೀಡಿದರು.ಮುಖ್ಯಮಂತ್ರಿ ಜೊತೆಗೆ ಸಚಿವರು, ಅನೇಕ ಶಾಸಕರು ಹಾಗೂ ಮೇಯರ್ ಪಾಲ್ಗೊಂಡು ನದಿ ದಂಡೆ ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶವನ್ನು ಸ್ವಚ್ಚತೆಯಿಂದ ಇಡುವ ನಿಟ್ಟಿನಲ್ಲಿ ನಾಗರಿಕರು ಪ್ರಯತ್ನಿಸಬೇಕಾಗಿದೆ ಎಂದರು. ರಾಷ್ಟ್ರಪಿತ ಮಹಾತ್ಮಗಾಂಧಿ ಸ್ವತಂತ್ರ ಒಂದನೇ ಕನಸಾಗಿ ಹೊಂದಿರಲಿಲ್ಲ. ಸ್ವಚ್ಛ ಭಾರತ ಕೂಡಾ ಅವರ ಕನಸಾಗಿತ್ತು, ನಮ್ಮ ದೇಶವನ್ನು ಸ್ವಚ್ಚವಾಗಿಡುವುದು ಹಾಗೂ ಭಾರತ ತಾಯಿಗೆ ಸೇವೆ ಮಾಡುವುದು ನಮ್ಮ ಶಪಥವಾಗಬೇಕು ಎಂದು ಕರೆ ನೀಡಿದರು.
ವಿಶ್ವದಲ್ಲಿನ ನೂರಾರು ದೇಶಗಳು ಸ್ವಚ್ಛತೆಯಿಂದಾಗಿ ಖ್ಯಾತಿ ಪಡೆದುಕೊಂಡಿವೆ. ಭಾರತವೂ ಕೂಡಾ ಆ ಪಟ್ಟಿಯಲ್ಲಿ ಸೇರುವ ಗುರಿಯೊಂದಿಗೆ ಪ್ರತಿಯೊಬ್ಬ ನಾಗರಿಕರು ಪ್ರಯತ್ನಿಸಬೇಕು .ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲು ಸಮಯವನ್ನು ವಿನಿಯೋಗಿಸಲು ಪ್ರತಿಜ್ಞೆಯನ್ನು ತೆಗೆದುಕೊಳ್ಳಿ ಎಂದರು.
 2019ರೊಳಗೆ  ಸ್ವಚ್ಛ ಭಾರತ ಗುರಿ ಸಾಧನೆ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರಮೋದಿ  ಅಕ್ಟೋಬರ್ 2, 2014ರಲ್ಲಿ  ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅನೇಕ ಕಡೆಗಳಲ್ಲಿ ಸ್ವಚ್ಛ ಕಾರ್ಯ ನಡೆಸಿದ್ದಾರೆ. ಇತ್ತೀಚಿಗೆ ಲಖನೌದ ಕೊಳಚೆ ಪ್ರದೇಶವೊಂದರಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡಿದ್ದರು.  ಬಾಲು ಅಡ್ಡಾ ಮಲಿನ್ ಬಸ್ತಿಯಲ್ಲಿ ಸಂಪುಟದ ಸಚಿವರೊಂದಿಗೆ ಕಸ ಗುಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com