ಜಾರ್ಖಂಡ್: ಅಕ್ರಮ ಭೂ ಒತ್ತವರಿ ತೆರವು ವೇಳೆ ಕ್ರೇನ್ ಮೇಲೆ ಬಿದ್ದ ಕಟ್ಟಡ, ವಿಡಿಯೋ ವೈರಲ್

ಬಹುಮಹಡಿ ಕಟ್ಟಡವನ್ನು ಉರುಳಿಸುತ್ತಿದ್ದ ಜೆಸಿಬಿ ಮೇಲೆಯೇ ಕಡ್ಟಡ ಉರುಳಿ ಬಿದ್ದ ಪರಿಣಾಮ ಜೆಸಿಪಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕ್ರೇನ್ ಮೇಲೆ ಬಿದ್ದ ಕಟ್ಟಡ
ಕ್ರೇನ್ ಮೇಲೆ ಬಿದ್ದ ಕಟ್ಟಡ
ದುಮ್ಕಾ: ಜಾರ್ಖಂಡ್ ನಲ್ಲಿ ನಡೆಯುತ್ತಿದ್ದ ಅಕ್ರಮ ಭೂ ಒತ್ತುವರಿ ಕಾರ್ಯಚರಣೆ ವೇಳೆ ದುರಂತವೊಂದು ಸಂಭವಿಸಿದ್ದು, ಬಹುಮಹಡಿ ಕಟ್ಟಡವನ್ನು ಉರುಳಿಸುತ್ತಿದ್ದ ಜೆಸಿಬಿ ಮೇಲೆಯೇ ಕಡ್ಟಡ ಉರುಳಿ ಬಿದ್ದ ಪರಿಣಾಮ ಜೆಸಿಪಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಾರ್ಖಂಡ್ ನ ಧುಮ್ಕಾದಲ್ಲಿ ಸರ್ಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಅಕ್ರಮ ಭೂ ಒತ್ತುವರಿ ಕಾರ್ಯಾಚರಣೆ ನಡೆಯುತ್ತಿದ್ದು. ಜೆಸಿಬಿ ಚಾಲಕ ಮೂರು ಅಂತಸ್ತಿನ ಕಟ್ಟಡವನ್ನು ಕೆಡವುತ್ತಿದ್ದ. ಈ ವೇಳೆ ಕಟ್ಟಡ ಒಂದು ಕಡೆ ವಾಲಿ ನೋಡ ನೋಡುತ್ತಿದ್ದಂತೆಯೇ ಜೆಸಿಬಿ ಮೇಲೆ ಬಿದ್ದಿದೆ. ಪರಿಣಾಮ ಜೆಸಿಬಿಯಲ್ಲಿದ್ದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಇನ್ನು ಜೆಸಿಬಿ ಮೇಲೆ ಬಿದ್ದದ್ದ ಕಟ್ಟಡದ ಅವಶೇಷಗಳನ್ನು ಬರೊಬ್ಬರಿ 2 ಗಂಟೆಗಳ ಕಾಲ ಕಾರ್ಯಾಚರಣೆ ನಡಸಿ ತೆರವು ಗೊಳಿಸಲಾಯಿತು. ಗಾಯಗೊಂಡಿದ್ದ ಚಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕ ಚಿಕಿತ್ಸಾ ವೆಚ್ಚವನ್ನು ಸ್ಥಳೀಯ ಜಿಲ್ಲಾಡಳಿತವೇ ಭರಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com