ವಡೋದರಾ: ಶಾಲೆಯನ್ನು ಮುಚ್ಚಿಸಬೇಕೆಂದು ತನ್ನ ಕಿರಿಯ ಸಹಪಾಠಿಯನ್ನೇ ಕೊಂದ

ಶಾಲೆಯ ಶೌಚಗೃಹದಲ್ಲಿ ಒಂಭತ್ತನೇ ತರಗತಿ ವಿದ್ಯಾರ್ಥಿಯ ಹತ್ಯೆ ಸಂಬಂಧ ತನಿಖೆ ನಡೆಸಿರುವ ಪೋಲೀಸರು ಅದೇ ಶಾಲೆಯ ಇನ್ನೋರ್ವ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ವಡೋದರಾ: ಶಾಲೆಯನ್ನು ಮುಚ್ಚಿಸಬೇಕೆಂದು ತನ್ನ ಕಿರಿಯ ಸಹಪಾಠಿಯನ್ನೇ ಕೊಂದ
ವಡೋದರಾ: ಶಾಲೆಯನ್ನು ಮುಚ್ಚಿಸಬೇಕೆಂದು ತನ್ನ ಕಿರಿಯ ಸಹಪಾಠಿಯನ್ನೇ ಕೊಂದ
Updated on
ವಡೋದರಾ (ಗುಜರಾತ್): ಶಾಲೆಯ ಶೌಚಗೃಹದಲ್ಲಿ ಒಂಭತ್ತನೇ ತರಗತಿ ವಿದ್ಯಾರ್ಥಿಯ ಹತ್ಯೆ ಸಂಬಂಧ ತನಿಖೆ ನಡೆಸಿರುವ ಪೋಲೀಸರು  ಅದೇ ಶಾಲೆಯ ಇನ್ನೋರ್ವ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಶಾಲೆಯ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ತಾನು ಈ ದುಷ್ಕೃತ್ಯ ಎಸಗಿದ್ದೆ ಎಂದು ಆರೋಪಿಯಾದ ಹತ್ತನೇ ತರಗತಿ ವಿದ್ಯಾರ್ಥಿ ಹೇಳಿದ್ದಾನೆಂದು ಪೋಲೀಸರು ಮಾಹಿತಿ ಒದಗಿಸಿದ್ದಾರೆ.
ಮೃತ ವಿದ್ಯಾರ್ಥಿ ತಾದ್ವಿ ​ ಕೇವಲ ಒಂದು ವಾರದ ಹಿಂದೆ ಶಾಲೆಗೆ ನೂತನ ವಿದ್ಯಾರ್ರ್ಥಿಯಾಗಿ ದಾಖಲಾಗಿದ್ದ. ಆರೋಪಿಗೆ ತಾನು ಕೊಲ್ಲುವ ವಿದ್ಯಾರ್ಥಿಯ ಪರಿಚಯವೂ ಇರಲಿಲ್ಲ ಎನ್ನುವ ಅಚ್ಚರಿಯ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. 
ಶಿಕ್ಷಕರು ನಿಂದಿಸಿದರೆನ್ನುವ ಒಂದೇ ಕಾರಣಕ್ಕೆ ಶಾಲೆಯನ್ನು ಮುಚ್ಚಿಸುವ ಸಲುವಾಗಿ ಆರೋಪಿ ಈ ಕ್ರೂರ ಕೆಲಸಕ್ಕೆ ಕೈ ಹಾಕಿದ್ದಾನೆ. ಆರೊಪಿ ವಿದ್ಯಾರ್ಥಿಯು ಒಳ್ಳೆಯ ನಡತೆ ಹೊಂದಿರಲಿಲ್ಲ, ಶಿಕ್ಷಕರು ನಿಂದಿಸಿದ್ದಕ್ಕಾಗಿ ಶಾಲೆ ವಿರುದ್ಧ ದ್ವೇಷ ಸಾಧಿಸಿದ್ದ ವಿದ್ಯಾರ್ಥಿ ಶಾಲೆಯನ್ನು ಮುಚ್ಚಿಸಲು ಓರ್ವ ವಿದ್ಯಾರ್ಥಿಯನ್ನು ಕೊಲೆ ಮಾಡಲು ಮುಂದಾಗಿದ್ದಾಗಿ ಪೋಲೀಸರು ಹೇಳಿದ್ದಾರೆ.
ಮೃತ ವಿದ್ಯಾರ್ಥಿಯ ದೇಹದ ವಿವಿಧೆಡೆ 31 ಬಾರಿ ಇರಿದು ಆತನನ್ನು ಕೊಲ್ಲಲಾಗಿತ್ತು. ಅಲ್ಲಎ ದೇಹದ ಪಕ್ಕದಲ್ಲಿ ಕೃತ್ಯಕ್ಕೆ ಬಳಸಿದ್ದ ಚಾಕು ಪತ್ತೆಯಾಗಿತ್ತು. ಚಾಕು ಸೇರಿ ಹತ್ಯೆ ನಡೆಸಲು ಬೇಕಾದ ಎಲ್ಲಾ ಸಾಧನ ಸಲಕರಣೆಯನ್ನು ಆರೋಪಿಯು ಸಂಗ್ರಹ ಮಾಡಿದ್ದ . ಸಿಸಿಟಿವಿ ದೃಶ್ಯಗಳನ್ನು ಕಂಡು ಪೋಲೀಸರು ಆರೋಪಿಯನ್ನು ಬಂಧಿಸಿದ್ದು ಕೇವಲ 90 ಸೆಕೆಂಡ್ ನಲ್ಲಿ ಕೊಲೆ ನಡೆದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
17 ವರ್ಷದ ಆರೋಪಿಯನ್ನು ಪೋಲೀಸರು ಶುಕ್ರವಾರ ವಲ್ಸಾಡ್ ನಲ್ಲಿ ಬಂಧಿಸಿದ್ದಾರೆ.ಆರೋಪಿ ವಡೋದರಾದವನಾಗಿದ್ದು ಕೃತ್ಯ ನಡೆಸಿದ ಬಳಿಕ ಬೇರೆ ಸ್ಥಳಕ್ಕೆ ತೆರಳೀದ್ದನು. ಅಪರಾಧ ನಡೆಸುವಾಗ ಆರೋಪಿ ಧರಿಸಿದ್ದ ಉಡುಪುಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದು  ಜುವೆನೈಲ್ ಜಸ್ಟಿಸ್ ಮಂಡಳಿ ಮುಂದೆ ಆರೋಪಿಯನ್ನು ಹಾಜರು ಪಡಿಸಿದ್ದಾರೆ. ಇದೀಗ ಆರೋಪಿಯನ್ನು ಅಬ್ಸರ್ವೇಷನ್ ಹೋಂ ಗೆ ಸೇರಿಸಲಾಗಿದೆ.
ಜೂನ್ 22 ರಂದು ಶಾಲೆಯ ವಾಷ್ ರೂಮ್ನಲ್ಲಿ 14 ವರ್ಷದ ಹುಡುಗನೊಬ್ಬನ ಮ್ತದೇಹವು ಪತ್ತೆಯಾಗಿತ್ತು. ಸತ್ತ ವಿದ್ಯಾರ್ಥಿಯ ದೇಹದ ನಾನಾ ಭಾಗಗಳಲ್ಲಿ ಗಾಯಗಳು ಕಂಡುಬಂದಿದ್ದವು. 
ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ಗುರುಗ್ರಾಮದ ರಿಯಾನ್‌ ಅಂತಾರಾಷ್ಟ್ರೀಯ ಶಾಲೆಯ ಶೌಚಗೃಹದಲ್ಲಿ ಏಳು ವರ್ಷದ ಪ್ರದ್ಯುಮ್ನನ ಹತ್ಯೆಯಾಗಿದ್ದು ಇಡೀ ದೇಶ ಬೆಚ್ಚಿ ಬಿದ್ದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com