ಇಂದಿರಾ ಗಾಂಧಿಯನ್ನು ಹಿಟ್ಲರ್'ಗೆ ಹೋಲಿಸಿದ ಜೇಟ್ಲಿ: ಪ್ರಧಾನಿ ಮೋದಿ ಬೆಂಬಲ

ತುರ್ತು ಪರಿಸ್ಥಿತಿಯ 43ನೇ ವರ್ಷಾಚರಣೆ ಹಿನ್ನಲೆಯಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರನ್ನು ಹಿಟ್ಲರ್'ಗೆ ಹೋಲಿಕೆ ಮಾಡಿದ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಪ್ರಧಾನಿ ಮೋದಿ ಬೆಂಬಲ ವ್ಯಕ್ತಪಡಿಸಿದ್ದಾರೆ...
ಪ್ರಧಾನಿ ಮೋದಿ, ಅರುಣ್ ಜೇಟ್ಲಿ
ಪ್ರಧಾನಿ ಮೋದಿ, ಅರುಣ್ ಜೇಟ್ಲಿ
ಮುಂಬೈ; ತುರ್ತು ಪರಿಸ್ಥಿತಿಯ 43ನೇ ವರ್ಷಾಚರಣೆ ಹಿನ್ನಲೆಯಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರನ್ನು ಹಿಟ್ಲರ್'ಗೆ ಹೋಲಿಕೆ ಮಾಡಿದ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಪ್ರಧಾನಿ ಮೋದಿ ಬೆಂಬಲ ವ್ಯಕ್ತಪಡಿಸಿದ್ದಾರೆ. 
ತುರ್ತು ಪರಿಸ್ಥಿತಿಯ ಭೀಕರ ದಿನಗಳನ್ನು ನೆನೆದು ಜೇಟ್ಲಿಯವರು ಬರೆದಿರುವ ಬರಹವನ್ನು ಪ್ರಧಾನಿ ಮೋದಿಯವರು ಸಾಮಾಜಿಕ ಜಾಲತಾಣದಲ್ಲಿರುವ ತಮ್ಮ ಖಾತೆಯಲ್ಲಿ ಹಂಚಿಕೆ ಮಾಡಿಕೊಂಡಿದ್ದು, ಈ ಬರಹವನ್ನು ಓದುವಂತೆ ಜನರಿಗೆ ತಿಳಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಜೇಟ್ಲಿಯವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. 
ತುರ್ತು ಪರಿಸ್ಥಿತಿಯಲ್ಲಿ ಹೋರಾಡಿದ ಧೀರ ಮಹಿಳೆ, ಮಹನೀಯರ ಧೈರ್ಯವನ್ನು ಕೊಂಡಾಡಿ ಮೋದಿಯವರು ಟ್ವೀಟ್ ಮಾಡಿದ್ದಾರೆ. 
ಇದಲ್ಲದೆ, ಪ್ರಜಾಪ್ರಭುತ್ವ ಬಲಿಷ್ಠಗೊಳಿಸಲು ಎಲ್ಲರೂ ಶ್ರಮಿಸಬೇಕಿದೆ. ಚರ್ಚೆ, ಪ್ರಶ್ನೆ ಮಾಡುವುದು ಹಾಗೂ ಬರಹದ ಮೂಲಕ ಪ್ರಜಾಪ್ರಭುತ್ವವನ್ನು ಕಾಪಾಡಬೇಕಿದೆ. ಸಂವಿಧಾನದ ಮೂಲ ಸಿದ್ಧಾಂತಗಳನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ. 
1975ರ ಜೂನ್ 25ರಂದು ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿವಿಧಿಸಿದ್ದ ತುರ್ತು ಪರಿಸ್ಥಿತಿಗೆ 43 ವರ್ಷಗಳಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com