ಶೈಕ್ಷಣಿಕ ಪಠ್ಯದಲ್ಲಿ ತುರ್ತು ಪರಿಸ್ಥಿತಿ ಕುರಿತ ಪಾಠ ಸೇರ್ಪಡೆಯಾಗಬೇಕು: ಉಪ ರಾಷ್ಟ್ರಪತಿ

ಶೈಕ್ಷಣಿಕ ಪಠ್ಯದಲ್ಲಿ ತುರ್ತು ಪರಿಸ್ಥಿತಿ ಕುರಿತ ಪಾಠ ಸೇರ್ಪಡೆಗೊಳ್ಳಬೇಕೆಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಮಂಗಳವಾರ ಹೇಳಿದ್ದಾರೆ...
ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು
ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು
ನವದೆಹಲಿ; ಶೈಕ್ಷಣಿಕ ಪಠ್ಯದಲ್ಲಿ ತುರ್ತು ಪರಿಸ್ಥಿತಿ ಕುರಿತ ಪಾಠ ಸೇರ್ಪಡೆಗೊಳ್ಳಬೇಕೆಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಮಂಗಳವಾರ ಹೇಳಿದ್ದಾರೆ. 
ಮಾಜಿ ಪತ್ರಕರ್ತ ಹಾಗೂ ಪ್ರಸಾರ ಭಾರತಿ ಅಧ್ಯಕ್ಷ ಸೂರ್ಯ ಪ್ರಕಾಶ್ ಅವರು ಬರೆದಿರುವ 'ಎಮರ್ಜೆನ್ಸಿ; ಇಂಡಿಯನ್ ಡೆಮಾಕ್ರಸಿಸ್ ಡಾರ್ಕೆಸ್ ಹವರ್' ಪುಸ್ತಕವನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿರುವ ಅವರು, ಭಾರತೀಯ ಸಂವಿಧಾನದಲ್ಲಿಯೇ ತುರ್ತು ಪರಿಸ್ಥಿತಿ ಅತ್ಯಂತ ಕರಾಳ ಅವಧಿಯಾಗಿದೆ. ಇಂತಹ ತುರ್ತುಪರಿಸ್ಥಿತಿ ಕುರಿತ ಪಾಠವನ್ನು ಶೈಕ್ಷಣಿಕ ಸಂಸ್ಥೆಗಳು ತಮ್ಮ ಪಠ್ಯಗಳಲ್ಲಿ ಸೇರ್ಪಡೆಗೊಳಿಸಬೇಕೆಂದು ಹೇಳಿದ್ದಾರೆ. 
ತುರ್ತು ಪರಿಸ್ಥಿತಿ ಭಾರತದ ಅತ್ಯಂತ ಕರಾಳ ಅವಧಿಯಾಗಿದ್ದು, ಇಂತಹ ತುರ್ತು ಪರಿಸ್ಥಿತಿ ಕುರಿತು ಯುವಕರು ತಿಳಿದುಕೊಳ್ಳಬೇಕಿದೆ. ತುರ್ತು ಪರಿಸ್ಥಿತಿಯನ್ನು ಯಾವಾಗ ಹೇರಲಾಯಿತು? ಯಾವ ಕಾರಣಕ್ಕೆ ಹೇರಲಾಗಿತ್ತು? ಈ ಬಗ್ಗೆ ಅವರಿಗೆ ಶಿಕ್ಷಣ ನೀಡಬೇಕು. 
ಪ್ರಜಾಪ್ರಭುತ್ವ ಗೆದ್ದ ಬಳಿಕ ಯಾವುದೇ ಸರ್ಕಾರ ಕೂಡ ಇಂತಹ ದೊಡ್ಡ ನಿರ್ಧಾರಗಳಿಗೆ ಕೈ ಹಾಕುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com