30 ಸಾವಿರ ರೂ. ಪಿಜ್ಜಾ ತಿನ್ನುವವರಿಗೆ, 12 ಸಾವಿರ ರೂ. ವೇತನದ ಉದ್ಯೋಗ ಕಾಣುವುದಿಲ್ಲ: ರಾಹುಲ್ ಗೆ ಬಿಜೆಪಿ ತಿರುಗೇಟು

ಉದ್ಯೋಗ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಬಿಜೆಪಿ, 30 ಸಾವಿರ ರೂ. ಪಿಜ್ಜಾ ತಿನ್ನುವವರಿಗೆ, 12 ಸಾವಿರ ರೂ. ವೇತನದ ಉದ್ಯೋಗ ಕಾಣುವುದಿಲ್ಲ ಎಂದು ವ್ಯಂಗ್ಯ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಉದ್ಯೋಗ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಬಿಜೆಪಿ, 30 ಸಾವಿರ ರೂ. ಪಿಜ್ಜಾ ತಿನ್ನುವವರಿಗೆ, 12 ಸಾವಿರ ರೂ. ವೇತನದ ಉದ್ಯೋಗ ಕಾಣುವುದಿಲ್ಲ ಎಂದು ವ್ಯಂಗ್ಯ ಮಾಡಿದೆ.
ದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ಉದ್ಯೋಗ ಸೃಷ್ಟಿ ಆಗಿಲ್ಲ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು, ಉದ್ಯೋಗ ಸೃಷ್ಟಿಯಾಗಿಲ್ಲ ಎನ್ನುವವರು  ಬಡಮಹಿಳೆ ಕಲಾವತಿ ಅವರ ಮನೆಗೆ ರಾತ್ರಿ ವೇಳೆ ಬಂದು ನೋಡಲಿ. ಅವರು ಸಂಪಾದನೆ ಹೇಗಿದೆ ಎಂಬುದನ್ನು. ಅದೂ ನಿಜ.. 30 ಸಾವಿರ ರೂ. ಗಳ ಪಿಜ್ಜಾ ತಿನ್ನುವವರಿಗೆ 12 ಸಾವಿರ ರೂ.ಗಳ ಉದ್ಯೋಗ ಎಲ್ಲಿ ಕಾಣುತ್ತದೆ. ಬಡತನವನ್ನೇ ನೋಡದ ಮಂದಿ ಬಡವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಗುಜರಾತ್ ನ ಸಬರಮತಿ ನದಿಯ ಪಾರ್ಕ್ ನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಾತನಾಡಿದರು. ಈ ವೇಳೆ ಕೇಂದ್ರ ಸರ್ಕಾರ 10 ಕೋಟಿ ಜನರಿಗೆ ಉದ್ಯೋಗ ಕಲ್ಪಿಸಿದ್ದು, ತಮ್ಮ ಸಚಿವಾಲಯದಿಂದ ಕೋಟ್ಯಂತರ ಜನ ಉದ್ಯೋಗ ಪಡೆದಿದ್ದಾರೆ. ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಅಡಿಯಲ್ಲಿ 10 ಕೋಟಿ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಮಾಸಿಕ 12 ಸಾವಿರ ರೂ. ನೀಡಬಲ್ಲ ಶೇ.70ರಷ್ಟು ಉದೋಗ ಸೃಷ್ಟಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಕೌಶಲ್ಯ ತರಬೇತಿ ಕುರಿತು ಯೋಜನೆ ಹಮ್ಮಿಕೊಂಡಿದ್ದು, ಯೋಜನೆ ಅಡಿಯಲ್ಲಿ ಕೋಟ್ಯಂತರ ಮಂದಿ ಫಲಾನುಭವಿಗಳಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com