ನಿಕ್ಕಿ ಹ್ಯಾಲೆ-ಮೋದಿ ಭೇಟಿ ಬೆನ್ನಲ್ಲೆ ಯುಎಸ್-ಇಂಡಿಯಾ 2 + 2 ಸಂವಾದ ಮುಂದೂಡಿಕೆ

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರುಗಳು ಜುಲೈ 6 ರಂದು ವಾಷಿಂಗ್ ಟನ್ ನಲ್ಲಿ ಭಾಗವಹಿಸಬೇಕಾಗಿದ್ದ ಮೊದಲ....
ನಿಕ್ಕಿ ಹ್ಯಾಲೆ-ಮೋದಿ ಭೇಟಿ  ಬೆನ್ನಲ್ಲೆ ಯುಎಸ್-ಇಂಡಿಯಾ 2 + 2 ಸಂವಾದ ಮುಂದೂಡಿಕೆ
ನಿಕ್ಕಿ ಹ್ಯಾಲೆ-ಮೋದಿ ಭೇಟಿ ಬೆನ್ನಲ್ಲೆ ಯುಎಸ್-ಇಂಡಿಯಾ 2 + 2 ಸಂವಾದ ಮುಂದೂಡಿಕೆ
ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರುಗಳು ಜುಲೈ 6 ರಂದು ವಾಷಿಂಗ್ ಟನ್ ನಲ್ಲಿ ಭಾಗವಹಿಸಬೇಕಾಗಿದ್ದ ಮೊದಲ ಭಾರತ-ಅಮೆರಿಕಾ ದ್ವಿಪಕ್ಷೀಯ  ಕಾರ್ಯತಂತ್ರ ಸಂಬಂಧಿತ  2 + 2 ಸಂವಾದ ಕಾರ್ಯಕ್ರಮ ಅನಿವಾರ್ಯ ಕಾರ್ಣಗಳಿಂದ ಮುಂದೂಡಲ್ಪಟ್ಟಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ಅಮೆರಿಕಾದ ರಾಯಭಾರಿ ನಿಕ್ಕಿ ಹ್ಯಾಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಅವರ ಭೇಟಿಯ ವೇಳೆಯೇ ಈ ವರ್ತಮಾನ ಹೊರಬಿದ್ದಿದೆ.
"ಅನಿವಾರ್ಯ ಕಾರಣಗಳಿಂದಾಗಿ." ಸಂವಾದ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಭಾರತವು ಅಮೆರಿಕಾ ಉತ್ಪನ್ನಗಳ ಆಮದಿನ ಮೇಲೆ ಶೇ.100ರಷ್ಟು ಸುಂಕ ಹೇರಿರುವ ಬಗೆಗೆ ಅಧ್ಯಕ್ಷ ಟ್ರಂಪ್ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೀಗ ವಿದೇಶಾಂಗ ಸಚಿವೆ ಸುಷ್ಮಾ ಜತೆ ಮಾತನಾಡಿದ ಅಮೆರಿಕಾ ರಾಜ್ಯ ಕಾರ್ಯದರ್ಶಿ ಮೈಕ್ ಪೋಂಪಿಯೋ  ಸಂವಾದ ಕಾರ್ಯಕ್ರಮ ಮುಂದೂಡಲ್ಪಟ್ಟ ಬಗೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಹಲವು ಬಾರಿ ಅಡೆ ತಡೆಗಳಿಂದ ಮುಂದೂಡಲ್ಪಟ್ಟಿದ್ದ ಭಾರತ-ಅಮೆರಿಕಾ ನಡುವಿನ ಮೊದಲ ಮೊದಲ 2 + 2  ರಾಜತಾಂತ್ರಿಕ ಸಂವಾದ ಕಾರ್ಯಕ್ರಮ ಜುಲೈ 6ಕ್ಕೆ ವಾಷಿಂಗ್ ಟನ್ ನಲ್ಲಿ ನಿಗದಿಯಾಗಿತ್ತು.
ಪೋಂಪಿಯೋ , ಸುಷ್ಮಾ ಸ್ವರಾಜ್, ನಿರ್ಮಲಾ ಸೀತಾರಾಮನ್ ಹಾಗೂ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕಾಗಿತ್ತು.
ಭದ್ರತೆ ಮತ್ತು ರಕ್ಷಣಾ ಸಹಕಾರ ಸಂಬಂಧ ಭಾರತ-ಅಮೆರಿಕಾ ಮಾತುಕತೆ ನಡೆಸಬೇಕಾಗಿದ್ದು ಎರಡೂ ದೇಶಗಳು ಜಂಟಿಯಾಗಿ ಜಾಗತಿಕ ಸವಾಲುಗಳನ್ನು ಎದುರಿಸುವ ಸಂಬಂಧ ಚರ್ಚೆಗಳು ನಡೆಯಬೇಕಾಗಿತ್ತು.
ಈ ಹಿಂದೆ ಏಪ್ರಿಲ್ ನಲ್ಲಿ ಈ ಸಂವಾದ ಕಾರ್ಯಕ್ರಮ ನಿಗದಿಯಾಗಿದ್ದಾಗ ಕಡೆ ಕ್ಷಣದಲ್ಲಿ ಅಧ್ಯಕ್ಷ ಟ್ರಂಪ್ ರಾಜ್ಯ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್.ಅವರನ್ನು ವಜಾ ಮಾಡಿದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com