ಟೋಪಿ ಧರಿಸಲು ನಿರಾಕರಿಸುತ್ತಿರುವ ಯೋಗಿ
ದೇಶ
ಸಂತ ಕಬೀರ್ ಪವಿತ್ರ ಕ್ಷೇತ್ರದಲ್ಲಿ ಮುಸ್ಲಿಂ ಟೋಪಿ ಧರಿಸಲು ಯೋಗಿ ನಕಾರ
ಉತ್ತರ ಪ್ರದೇಶದ ಮಾಘರ್ ನಲ್ಲಿರುವ ಪ್ರಸಿದ್ಧ ಸಂತ ಕಬೀರ್ ಪವಿತ್ರ ಕ್ಷೇತ್ರಕ್ಕೆ ಇಂದು ಭೇಟಿ ನೀಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್...
ಮಾಘರ್: ಉತ್ತರ ಪ್ರದೇಶದ ಮಾಘರ್ ನಲ್ಲಿರುವ ಪ್ರಸಿದ್ಧ ಸಂತ ಕಬೀರ್ ಪವಿತ್ರ ಕ್ಷೇತ್ರಕ್ಕೆ ಇಂದು ಭೇಟಿ ನೀಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಸ್ಲಿಂ ರ ಧರಿಸುವ ಉಣ್ಣೆಯ ಟೋಪಿ ಧರಿಸಲು ನಿರಾಕರಿಸಿದ್ದಾರೆ.
ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಅಥವಾ ಜಮ್ಮು -ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ ಅಂತಹವರು ಇಂತಹ ಟೋಪಿ ಧರಿಸುತ್ತಿದ್ದರಂತೆ.
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಇಂದು ಭೇಟಿ ನೀಡಿದ್ದ ಆದಿತ್ಯನಾಥ್ ಅವರಿಗೆ ಅಲ್ಲಿನ ಧರ್ಮಗುರುಗಳು ಟೋಪಿ ಧರಿಸಲು ಮುಂದಾದಾಗ ಅದನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ನಿರಾಕರಿಸಿದ್ದಾರೆ.
2011ರ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅಹಮದಾಬಾದಿನಲ್ಲಿ ಸದ್ಬಾವನಾ ಉಪವಾಸ ಸಂದರ್ಭದಲ್ಲಿ ಮುಸ್ಲಿಂ ಟೋಪಿ ಧರಿಸಲು ನಿರಾಕರಿಸಿದ್ದರು. ಆ ಟೋಪಿ ಐಕ್ಯತೆಯ ಸಂಕೇತವಾಗಿದ್ದರೆ ಮಹಾತ್ಮ ಗಾಂಧಿ ಏಕೆ ಅದನ್ನು ತೊಡಲಿಲ್ಲ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿಕೆ ನೀಡಿದ್ದರು.
ಟೋಪಿ ಧರಿಸುವುದು ಐಕ್ಯತೆಯ ಸಂಕೇತವಾಗಿದ್ದರೆ, ಮಹಾತ್ಮ ಗಾಂಧೀಜಿ, ಸರ್ದಾರ್ ಪಟೇಲ್, ಪಂಡಿತ್ ಜವಹರಲಾಲ್ ನೆಹರೂ ಏಕೆ ಆ ಟೋಪಿ ತೊಟ್ಟಿರಲಿಲ್ಲ ಎಂದು ಪ್ರಶ್ನಿಸಿದ್ದರು.
ಎರಡು ದಿನಗಳ ಕಬೀರ್ ಮಹೋತ್ಸವ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಮಾಘರ್ ಗೆ ಆಗಮಿಸಿದ್ದು, ಕಬೀರ್ ಅವರು ಮಝರ್ ನಲ್ಲಿ ಚಾದರ್ ಪೂಜೆ ಸಲ್ಲಿಸಿದರು. ಬಳಿಕ ಕಬೀರ್ ಅಕಾಡೆಮಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಕಬೀರ್ ಅವರ 500ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಸಂಗೀತ , ನೃತ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ