ಸುಷ್ಮಾ ಸ್ವರಾಜ್ ಕನಸಿನ ಪಾಸ್ಪೋರ್ಟ್ ಸೇವಾ ಮೊಬೈಲ್ ಆಪ್ ಗೆ ಭಾರಿ ಜನ ಬೆಂಬಲ: 2 ದಿನಗಳಲ್ಲಿ 1 ಮಿಲಿಯನ್ ಡೌನ್ಲೋಡ್
ವಿದೇಶಾಂಗ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ಕನಸಿನ ಪಾಸ್ಪೋರ್ಟ್ ಸೇವಾ ಮೊಬೈಲ್ ಆಪ್ ಗೆ ಭಾರಿ ಜನಬೆಂಬಲ ವ್ಯಕ್ತವಾಗಿದ್ದು ಕೇವಲ 2 ದಿನಗಳಲ್ಲಿ 1 ಮಿಲಿಯನ್ ಜನರು ಡೌನ್ಲೋಡ್ ಮಾಡಿದ್ದಾರೆ.
ನವದೆಹಲಿ: ವಿದೇಶಾಂಗ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ಕನಸಿನ ಪಾಸ್ಪೋರ್ಟ್ ಸೇವಾ ಮೊಬೈಲ್ ಆಪ್ ಗೆ ಭಾರಿ ಜನಬೆಂಬಲ ವ್ಯಕ್ತವಾಗಿದ್ದು ಕೇವಲ 2 ದಿನಗಳಲ್ಲಿ 1 ಮಿಲಿಯನ್ ಜನರು ಡೌನ್ಲೋಡ್ ಮಾಡಿದ್ದಾರೆ.
ಈ ಅಂಶವನ್ನು ಸ್ವತಃ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಬಹಿರಂಗಪಡಿಸಿದ್ದಾರೆ. ದೇಶದ ಯಾವುದೇ ಮೂಲೆಯಿಂದಲೂ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಲು ನೆರವಾಗುವುದಕ್ಕೆ ಈ ಆಪ್ ನ್ನು ತಯಾರಿಸಲಾಗಿತ್ತು. ಜೂ.27 ರಂದು 6 ನೇ ಪಾಸ್ಪೋರ್ಟ್ ಸೇವಾ ದಿವಸ್ ಕಾರ್ಯಕ್ರಮದ ಅಂಗವಾಗಿ ಈ ಆಪ್ ನ್ನು ಲೋಕಾರ್ಪಣೆಗೊಳಿಸಲಾಗಿತ್ತು.
Passport Seva mobile App launched recently by the Ministry of External Affairs recently has already registered 1 million downloads. https://t.co/P2sQEGWETp
ಆಂಡ್ರಾಯ್ಡ್ ಹಾಗೂ ಐಒಎಸ್ ಗಳಲ್ಲಿ ಆಪ್ ಲಭ್ಯವಿದ್ದು, ಪಾಸ್ಪೋರ್ಟ್ ಗಾಗಿ ಅರ್ಜಿ ಸಲ್ಲಿಸುವುದು, ಹಣ ಪಾವತಿಸುವುದು ಹಾಗೂ ಪಾಸ್ಪೋರ್ಟ್ ಪಡೆಯಲು ಸಮಯ ನಿಗದಿಪಡಿಸುವುದಕ್ಕೂ ಆಪ್ ಮೂಲಕವೇ ಮಾಡಬಹುದಾಗಿದೆ.