'ಭಾರತದ ಯೋಜಿತ ಆರ್ಥಿಕತೆಯ ಗುರು' ಪ್ರಶಾಂತ ಚಂದ್ರ ಮಹಾಲನೊಬಿಸ್'ಗೆ ಗೂಗಲ್ ಡೂಡಲ್ ಗೌರವ
ದೇಶ
'ಭಾರತದ ಯೋಜಿತ ಆರ್ಥಿಕತೆಯ ಗುರು' ಪ್ರಶಾಂತ ಚಂದ್ರ ಮಹಾಲನೊಬಿಸ್'ಗೆ ಗೂಗಲ್ ಡೂಡಲ್ ಗೌರವ
ಭಾರತದ ಯೋಜನಾ ಆರ್ಥಿಕ ಮಾದರಿಯ ಗುರು ಎಂದೇ ಖ್ಯಾತಿ ಪಡೆದಿರುವ ಪ್ರಶಾಂತ ಚಂದ್ರ ಮಹಾಲನೊಬಿಸ್ ಅವರ 125ನೇ ಜನ್ಮದಿನ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಶುಕ್ರವಾರ ಗೌರವ ನೀಡಿದೆ...
ನವದೆಹಲಿ: ಭಾರತದ ಯೋಜನಾ ಆರ್ಥಿಕ ಮಾದರಿಯ ಗುರು ಎಂದೇ ಖ್ಯಾತಿ ಪಡೆದಿರುವ ಪ್ರಶಾಂತ ಚಂದ್ರ ಮಹಾಲನೊಬಿಸ್ ಅವರ 125ನೇ ಜನ್ಮದಿನ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಶುಕ್ರವಾರ ಗೌರವ ನೀಡಿದೆ.
ಇಂದು ಮಹಾಲನೊಬಿಸ್ ಅವರ 125ನೇ ಜನ್ಮದಿನವಾಗಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ಸುಂದರವಾದ ಡೂಡಲ್ ಬಿಡಿಸುವ ಮೂಲಕ ಗೌರವ ಸಮರ್ಪಿಸಿದೆ.
ಮಹಾಲನೊಬಿಸ್ ಅವರು ಭಾರತೀಯ ವಿಜ್ಞಾನಿ ಮತ್ತು ಅನ್ವಯಿಕ ಸಂಖ್ಯಾಶಾಸ್ತ್ರಜ್ಞರಾಗಿದ್ದರು. ಅಲ್ಲದೆ, ಸ್ವತಂತ್ರ ಭಾರತದ ಪ್ರಪ್ರಥಮ ಯೋಜನಾ ಆಯೋಗದ ಸದಸ್ಯರಾಗಿದ್ದರು.
ಸಂಖ್ಯಾಶಾಸ್ತ್ರಕ್ಕೆ ಮಹಾಲನೊಬಿಸ್ ಅವರು ಮಹತ್ತರವಾದ ಕೊಡುಗೆ ಎಂದರೆ, ಮಹಾಲನೊಬಿಸ್ ಅಳತೆ. ಮಾನವಶಾಶ್ತ್ರಗಲ್ಲಿ ಗಮನಾರ್ಹ ಅಧ್ಯಯನ ಮಾಡಿದ್ದ ಮಹಾಲನೊಬಿಸ್ ಅವರು, ಸಂಖ್ಯಾಶಾಸ್ತ್ರರಾಗಿ ಆಂತ್ರೋಪೊಮಿಟ್ರಿಯಲ್ಲಿ ಮಹತ್ವದ ಅಧ್ಯಯನ ಮಾಡಿದ್ದರು. ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯನ್ನು ಸ್ಥಾಪಿಸಿ, ದೊಡ್ಡ ಪ್ರಮಾಣದ ಮಾದರಿ ಸಮೀಕ್ಷೆಗಳ ವಿನ್ಯಾಸಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.
ಮಹಾಲನೊಬಿಸ್ ಅವರ ಸಾಧನೆಗೆ ಪದ್ಮ ವಿಭೂಷಣ ಸೇರಿದಂದೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಖ್ಯಾತ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರು ಮಹಾಲನೊಬಿಸ್ ಅವರಿಗೆ ಶಿಕ್ಷಕರಾಗಿದ್ದರು. ಖ್ಯಾತ ಗಣಿತ ತಜ್ಞ ಶ್ರೀನಿವಾಸ್ ರಾಮಾನುಜನ್ ಅವರೊಂದಿಗೂ ಮಹಾಲನೊಬಿಸ್ ಅವರು ಸಂವಾದ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ