ಕಣ್ಣೀರಿಡುತ್ತಿರುವ ದೇವತೆ: ವಿಸ್ಮಯಕಾರಿ ಘಟನೆ ನೋಡಲು ನೆರೆದ ಜನಸ್ತೋಮ

ದೇವತೆಯ ವಿಗ್ರಹದಿಂದ ಕಣ್ಣೀರು ಸುರಿಯುತ್ತಿದ್ದು, ಈ ವಿಸ್ಮಯಕಾರಿ ಘಟನೆಯನ್ನು ನೋಡಲು ಜನಸ್ತೋಮ ನೆರೆದಿರುವ ಘಟನೆ ತೆಲಂಗಾಣದ ಸಿದ್ದಿಪೇಟ್ ನ ಚಿನ್ನಕೊಡೂರು ಗ್ರಾಮದಲ್ಲಿ ನಡೆದಿದೆ.
ಕಣ್ಣೀರಿಡುತ್ತಿರುವ ದೇವತೆ: ವಿಸ್ಮಯಕಾರಿ ಘಟನೆ ನೋಡಲು ನೆರೆದ ಜನಸ್ತೋಮ
ಕಣ್ಣೀರಿಡುತ್ತಿರುವ ದೇವತೆ: ವಿಸ್ಮಯಕಾರಿ ಘಟನೆ ನೋಡಲು ನೆರೆದ ಜನಸ್ತೋಮ
ಸಿದ್ದಿಪೇಟ್: ದೇವತೆಯ ವಿಗ್ರಹದಿಂದ ಕಣ್ಣೀರು ಸುರಿಯುತ್ತಿದ್ದು, ಈ ವಿಸ್ಮಯಕಾರಿ ಘಟನೆಯನ್ನು ನೋಡಲು ಜನಸ್ತೋಮ ನೆರೆದಿರುವ ಘಟನೆ ತೆಲಂಗಾಣದ ಸಿದ್ದಿಪೇಟ್ ನ ಚಿನ್ನಕೊಡೂರು ಗ್ರಾಮದಲ್ಲಿ ನಡೆದಿದೆ. 
ಸದಾ ಮಂದಗತಿಯಲ್ಲಿ ಸಾಗುವ ಚಿನ್ನಕೊಡೂರು ಗ್ರಾಮದಲ್ಲಿನ ರೇಣುಕಾ ಎಲ್ಲಮ್ಮ ದೇವಾಲಯದಲ್ಲಿರುವ ದೇವತೆಯ ವಿಗ್ರಹದಿಂದ ಕಣ್ಣೀರು ಸುರಿಯುತ್ತಿದ್ದು, ಈ ವಿಸ್ಮಯವನ್ನು ನೋಡಲು ಪಕ್ಕದ ಗ್ರಾಮದವರೂ ಧಾವಿಸುತ್ತಿದ್ದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ದೇವಿಯ ಕಣ್ಣೀರು ರಂಗಾ ನಾಯ್ಕ್ ಸಾಗರ್ ಯೋಜನೆಯಲ್ಲಿ ತಮ್ಮ ಗ್ರಾಮ ಮುಳುಗಡೆಯಾಗಬಹುದೆಂಬ ಸೂಚನೆಯಾಗಿದ್ದಿರಬಹುದು ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು. 
"ದೇವಿಯ ವಿಗ್ರಹದಿಂದ ಕಣ್ಣೀರು ಸುರಿಯುತ್ತಿರುವುದು ನಿಜ, ದೇವಿಯನ್ನು ಸಂತುಷ್ಟಗೊಳಿಸಲು ದೇವಾಲಯ ನಿರ್ಮಿಸಿಸಲು ತೀರ್ಮಾನಿಸಿ, ಆಶೀರ್ವಾದ ಬೇಡಿದ್ದೇವೆ" ಎಂದು ಗ್ರಾಮಸ್ಥರಾಗಿರುವ ಚಂದ್ರಮೌಳಿ ಹೇಳಿದ್ದಾರೆ. ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅರ್ಚಕಿ ಅಂಜವ್ವ ಈ ಘಟನೆಯನ್ನು ಮೊದಲು ಗಮನಿಸಿದ್ದಾರೆ. ಎಂದಿನಂತೆ ಪ್ರತಿ ನಿತ್ಯ ಪೂಜೆ ಸಲ್ಲಿಸಲು ಬಂದಿದ್ದಾಗ ವಿಗ್ರಹದಲ್ಲಿ ಕಣ್ಣೀರು ಕಾಣಿಸಿಕೊಂಡಿತ್ತು.  ಸುಮಾರು 15 ನಿಮಿಷಗಳ ಕಾಲ ಇದೇ ರೀತಿ ಮುಂದುವರೆದಿತ್ತು ಎಂದು ಅಂಜವ್ವ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com