ಇರಾನ್ ನಿಂದ ತೈಲ ಆಮದು: ಭಾರತದ ಸೌರ್ವಭೌಮತ್ವದಲ್ಲಿ ಅಮೆರಿಕಾ ಹಸ್ತಕ್ಷೇಪ ಸರಿಯಲ್ಲ - ಓವೈಸಿ

ಇರಾನ್ ನಿಂದ ಭಾರತ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಅಮೆರಿಕಾ ಹೇಳಿಕೆ ಕುರಿತು ಎಂಐಎಂ ಅಧ್ಯಕ್ಷ ಅಕ್ಬರುದ್ದೀನ್ ಓವೈಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತದ ಸಾರ್ವಭೌಮತ್ವದಲ್ಲಿ ಅಮೆರಿಕಾ ಹೇಗೆ ಹಸ್ತಕ್ಷೇಪ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಅಕ್ಬರುದ್ದೀನ್ ಓವೈಸಿ
ಅಕ್ಬರುದ್ದೀನ್ ಓವೈಸಿ
ಹೈದ್ರಾಬಾದ್:  ಇರಾನ್ ನಿಂದ ಭಾರತ ತೈಲ ಆಮದು ಮಾಡಿಕೊಳ್ಳುವುದನ್ನು  ನಿಲ್ಲಿಸಬೇಕೆಂದು ಅಮೆರಿಕಾ ಹೇಳಿಕೆ ಕುರಿತು  ಎಂಐಎಂ ಅಧ್ಯಕ್ಷ ಅಕ್ಬರುದ್ದೀನ್ ಓವೈಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತದ ಸಾರ್ವಭೌಮತ್ವದಲ್ಲಿ ಅಮೆರಿಕಾ ಹೇಗೆ ಹಸ್ತಕ್ಷೇಪ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಭಾರತಕ್ಕೆ ಆ ರೀತಿ ಹೇಳಲು ಅವರು ಯಾರು ?  ಇಲ್ಲಿಂದ , ಅಲ್ಲಿಂದ ತೈಲ ಆಮದು ಮಾಡಿಕೊಳ್ಳಿಅಂತಾ ಹೇಳಲು ಅವರು ಯಾರು ?  ಏನನ್ನು  ಕೊಳ್ಳಬೇಕು ಮತ್ತು ಏಲ್ಲಿಂದ ಕೊಳ್ಳಬೇಕು ಎಂದು ಹೇಳು ಅಮೆರಿಕಾ ಅಧ್ಯಕ್ಷ ಭಾರತದ ಸಾರ್ವಭೌಮತ್ವದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅವರು ಸಾರ್ವಜನಿಕ ಸಭೆಯಲ್ಲಿ  ಕಿಡಿಕಾರಿದರು.
ಭಾರತ ಮತ್ತಿತರ ರಾಷ್ಟ್ರಗಳು ನವೆಂಬರ್ 4 ರಿಂದ ಇರಾನ್ ನಿಂದ ತೈಲ ಆಮದನ್ನು ರದ್ದುಗೊಳಿಸಬೇಕು, ಇಲ್ಲದಿದ್ದರೆ  ಯಾವುದೇ ರೀತಿಯ ಸಾಲ ನೀಡುವುದಿಲ್ಲ ಎಂದು ಅಮೆರಿಕಾ ಹೇಳಿಕೆ ನೀಡಿತ್ತು.
ಇರಾಕ್ , ಸೌದಿ ಅರಬೀಯಾದ ನಂತರ ಇರಾನ್  ಭಾರತಕ್ಕೆ ತೈಲ ರಪ್ತು ಪೂರೈಕೆ ಮೂರನೇ ಅತಿದೊಡ್ಡ ದೊಡ್ಡ ರಾಷ್ಟ್ರವಾಗಿದೆ. ಏಪ್ರಿಲ್ 2017 ಹಾಗೂ ಜನವರಿ 2018ರವರೆಗೂ ಇರಾನ್ 18. 4 ಮಿಲಿಯನ್ ಟನ್ ನಷ್ಟು ತೈಲವನ್ನು ರಪ್ತು ಮಾಡಿದೆ.ರಷ್ಯಾ,ಯುರೋಪ್, ಮತ್ತು ಚೀನಾ ಅಮೆರಿಕಾ ವಿರುದ್ಧ ತಿರುಗಿ ಬಿದ್ದಿದ್ದು, ಭಾರತ ಕೂಡಾ ತನ್ನ ನೀತಿಯನ್ನು ದೃಢೀಕರಿಸಬೇಕಾಗಿದೆ ಎಂದು ಲೋಕಸಭಾ ಸಂಸದ ಓವೈಸಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಪ್ರಧಾನಿಯಾದ್ದರೆ ಪೆಟ್ರೋಲ್ ಬೆಲೆ ಇಳಿಕೆಯಾಗಲಿದೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದರು. ಆದರೆ. ಈಗ  ಪೆಟ್ರೋಲ್ ಬೆಲೆ 82 ರೂಪಾಯಿಗೆ ಏರಿಕೆಯಾಗಿದೆ ಎಂದು ಕೇಂದ್ರಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆಗೆ ತಮ್ಮ ಪಕ್ಷ ಸಿದ್ಧವಾಗಿದ್ದು,  ಒಂದು ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಒಂದಾದರೂ ಕೂಡಾ ಎಂಐಎಂ ಪಕ್ಷ ಯಶಸ್ವಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com