ಗೋಸಂರಕ್ಷಣೆ ಕಾರ್ಯಕರ್ತೆ 'ಮುಸ್ಲಿಂ ಮಹಿಳೆ'ಗೆ ಜೀವ ಬೆದರಿಕೆ; ರಕ್ಷಣೆಗಾಗಿ ಪ್ರಧಾನಿ ಮೋದಿಗೆ ಮನವಿ

ಗೋವುಗಳ ಸಂರಕ್ಷಣೆ ಮಾಡುವಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಮಹಿಳೆಯೊಬ್ಬರಿಗೆ ಜೀವ ಬೆದರಿಕೆ ಕರೆಗಳು ಬಂದ ಹಿನ್ನಲೆಯಲ್ಲಿ ಮುಸ್ಲಿಂ ಕಾರ್ಯಕರ್ತೆ ಮೆಹ್ರುನ್ನೀಸಾ ಖಾನ್ ಅವರು, ರಕ್ಷಣೆ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ...
ಗೋಸಂರಕ್ಷಣೆ ಕಾರ್ಯಕರ್ತೆ 'ಮುಸ್ಲಿಂ ಮಹಿಳೆ'ಗೆ ಜೀವ ಬೆದರಿಕೆ; ರಕ್ಷಣೆಗಾಗಿ ಪ್ರಧಾನಿ ಮೋದಿಗೆ ಮನವಿ
ಗೋಸಂರಕ್ಷಣೆ ಕಾರ್ಯಕರ್ತೆ 'ಮುಸ್ಲಿಂ ಮಹಿಳೆ'ಗೆ ಜೀವ ಬೆದರಿಕೆ; ರಕ್ಷಣೆಗಾಗಿ ಪ್ರಧಾನಿ ಮೋದಿಗೆ ಮನವಿ
ಭೋಪಾಲ್: ಗೋವುಗಳ ಸಂರಕ್ಷಣೆ ಮಾಡುವಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಮಹಿಳೆಯೊಬ್ಬರಿಗೆ ಜೀವ ಬೆದರಿಕೆ ಕರೆಗಳು ಬಂದ ಹಿನ್ನಲೆಯಲ್ಲಿ ಮುಸ್ಲಿಂ ಕಾರ್ಯಕರ್ತೆ ಮೆಹ್ರುನ್ನೀಸಾ ಖಾನ್ ಅವರು, ರಕ್ಷಣೆ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. 
ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿರುವ ಅವರು, ಗೋವುಗಳ ಸಂರಕ್ಷಣೆ ಮಾಡುತ್ತಿರುವುದಕ್ಕೆ ಸಂಬಂಧಿಕರು ನನಗೆ ಥಳಸಿದರು. ಅಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆಂದು ಹೇಳಿದ್ದಾರೆ. 
ಗೋವುಗಳ ಸಂರಕ್ಷಣೆ ಮಾಡುತ್ತಿರುವುದಕ್ಕೆ ಹಾಗೂ ತ್ರಿವಳಿ ತಲಾಖ್ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಸಂಬಂಧಿಕರು ನನಗೆ ಥಳಿಸಿ, ನಿಂದಿಸಿದರು. ಜೀವ ಬೆದರಿಕೆ ಹಿನ್ನಲೆಯಲ್ಲಿ ಕಳೆದ ಮೂರು ತಿಂಗಳಿನಿಂದಲೂ ಪೊಲೀಸರ ಸಹಾಯವನ್ನು ಕೇಳಿದ್ದೇನೆ. ಇದೀಗ ರಕ್ಷಣೆ ನೀಡುವಂತೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ತಿಳಿಸಿದ್ದಾರೆ. 
ಮಧ್ಯಪ್ರದೇಶದ ರಾಷ್ಟ್ರೀಯ ಹಸು ಸೇವಾ ಕಾರ್ಪ್ ನ ರಾಜ್ಯಾಧ್ಯಕ್ಷೆಯಾದಾಗಿನಿಂದಲೂ ನನಗೆ ಬೆದರಿಕೆಗಳು ಬರುತ್ತಲೇ ಇವೆ. ಹೊರಗಿನವರಿಂದ ಅಷ್ಟೇ ಅಲ್ಲದೆ, ಕುಟುಂಬಸ್ಥರಿಂದಲೂ ಬರುತ್ತಿವೆ. ಎಲ್ಲಿಯೇ ಹೋದರೂ ಗೌರವ ವಿಚಾರವಾಗಿದ್ದು, ಗೋಸಂರಕ್ಷಣೆ ಕೈಬಿಡುವಂತೆ ತಿಳಿಸುತ್ತಿದ್ದಾರೆ. ಏನನ್ನೂ ಮಾತನಾಡದ ಪ್ರಾಣಿಗಳು ಅವರ ಗೌರವನ್ನು ಹೇಗೆ ಹಾಳು ಮಾಡುತ್ತವೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com