ಶಿಕ್ಷಣ ಮತ್ತು ಆರೋಗ್ಯದಲ್ಲಿ ಗುಜರಾತ್ ನ ದಾಹೋದ್ ಅಗ್ರಸ್ಥಾನದಲ್ಲಿದ್ದು, ಆ ಬಳಿಕದ ಸ್ಥಾನದಲ್ಲಿ ಪಶ್ಚಿಮ ಸಿಕ್ಕಿಂ, ತಮಿಳುನಾಡಿನ ರಾಮನಾಥಪುರಂ, ಆಂಧ್ರ ಪ್ರದೇಶದ ವಿಜಯನಗರಂ ಮತ್ತು ವೈಎಸ್ ಆರ್ ಗಳು ಟಾಪ್ 5 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಉಳಿದಂತೆ ಉಗ್ರ ಪೀಡಿತ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಪಟ್ಟಿಯಲ್ಲಿ ಕಟ್ಟಕಡೆಯ ಸ್ಥಾನ ಪಡೆದುಕೊಂಡಿದೆ. ನೀತಿ ಆಯೋಗ ಪಟ್ಟಿ ಮಾಡಿರುವ ಒಂಭತ್ತು ಅತ್ಯಂತ ಕಡಿಮೆ ಅಭಿವೃದ್ಧಿ ಸಾಧಿಸಿರುವ ಜಿಲ್ಲೆಗಳಲ್ಲಿ ಬಿಜೆಪಿ ಆಡಳಿತ ವಿರುವ ಬಿಹಾರ. ಉತ್ತರ ಪ್ರದೇಶ., ಜಾರ್ಖಂಡ್ ಮತ್ತು ಛತ್ತೀಸ್ ಘಡ ರಾಜ್ಯಗಳ ಜಿಲ್ಲೆಗಳಿವೆ. ಈ ಪೈಕಿ ಬಿಹಾರದ ಬೇಗುಸರೈ, ಬಂಕಾ, ಖಗಾರಿಯಾ ಜಿಲ್ಲೆಗಳನ್ನು ಅತ್ಯಂತ ಕೆಟ್ಟ ಅಭಿವೃದ್ಧಿ ಜಿಲ್ಲೆಗಳು ಎಂದು ಗುರುತಿಸಲಾಗಿದೆ. ಬಿಹಾರದಲ್ಲಿ 13 ವರ್ಷಗಳ ಕಾಲ ಜೆಡಿಯು ಪಕ್ಷದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಬಿಜೆಪಿ ಪಾಲುದಾರ ಪಕ್ಷವಾಗಿದೆ.