ಮುಸ್ಲಿಂರ ಓಲೈಕೆ ಆರೋಪ, ಮತ್ತೆ ಟ್ರೋಲಾದ ಸುಷ್ಮಾ ಸ್ವರಾಜ್

ನವದಹೆಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟರ್ ನಲ್ಲಿ ಮತ್ತೆ ಟ್ರೋಲ್ ಗೆ ಆಹಾರವಾಗಿದ್ದಾರೆ. ಮುಸ್ಲಿಂರ ಓಲೈಕೆ ಆರೋಪಕ್ಕೆ ಗುರಿಯಾಗಿದ್ದಾರೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದಹೆಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟರ್ ನಲ್ಲಿ ಮತ್ತೆ ಟ್ರೋಲ್ ಗೆ ಆಹಾರವಾಗಿದ್ದಾರೆ. ಮುಸ್ಲಿಂರ ಓಲೈಕೆ  ಆರೋಪಕ್ಕೆ ಗುರಿಯಾಗಿದ್ದಾರೆ.  ಮುಸ್ಲಿಂ ಸಮುದಾಯವನ್ನು ತೃಪ್ತಿಪಡಿಸುವ ಕೆಲಸವನ್ನು ನಿಲ್ಲಿಸುವಂತೆ ಆಕೆಗೆ ಬುದ್ದಿವಾದ ಹೇಳಿ ಎಂದು  ಆಕೆಯ ಪತಿ ಸ್ವರಾಜ್ ಕೌಶಲ್ ಅವರಿಗೆ ಟ್ವಿಟ್ ಸಲಹೆ ನೀಡಲಾಗಿದೆ.
ಹಿಂದೂ ಮುಸ್ಲಿಂ ದಂಪತಿಗೆ ಅವಮಾನ ಮಾಡಿದ್ದ  ಲಖನೌ  ಪಾಸ್ ಪೋರ್ಟ್ ಸೇವಾ ಕೇಂದ್ರದ ಅಧಿಕಾರಿಯನ್ನು ವರ್ಗಾವಣೆ ಮಾಡಿ ದಂಪತಿಗೆ ನೆರವಾದುದ್ದಕ್ಕೆ ಸುಷ್ಮಾ ಸ್ವರಾಜ್ ಮೇಲೆ ಸೈಬರ್ ದಾಳಿ ನಡೆಯುತ್ತಿದೆ. ಈ ವಿಷಯವನ್ನು ಸಚಿವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
 ಜೂನ್ 17 ರಿಂದ 23ರವರೆಗೆ ನಾನು ದೇಶದಲ್ಲಿರಲಿಲ್ಲ. ನಾನು ಗೈರಾಗಿದ್ದಾಗ ಏನಾಗಿದೆಯೋ ನನಗೆ ತಿಳಿದಿಲ್ಲ. ಆದಾಗ್ಯೂ, ಕೆಲವು ಟ್ವೀಟ್ ಗಳ ಮೂಲಕ ನನ್ನನ್ನು ಗೌರವಿಸಲಾಗಿದೆ. ಅವುಗಳನ್ನು ನಿಮ್ಮ ಜತೆ ಹಂಚಿಕೊಳ್ಳುತ್ತೇನೆ. ಅದಕ್ಕಾಗಿ ಅವುಗಳನ್ನು ಲೈಕ್ ಮಾಡಿದ್ದೇನೆ ಎಂದು ನೋವಿನಿಂದ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ದಂಪತಿ ಹೇಳುವ ಪ್ರಕಾರ  ಪಾಸ್ ಪೋರ್ಟ್ ಸೇವಾ ಕೇಂದ್ರದ  ಅಧಿಕಾರಿ ಮಿಶ್ರಾ ,  ಮುಸ್ಲಿಂ  ಪತಿಯನ್ನು  ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಹಾಗೂ ಹಿಂದೂ ಯುವತಿ  ಮುಸ್ಲಿಂರನ್ನು ವಿವಾಹವಾಗದ್ದಕ್ಕೆ ನಿಂದಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.
ಈ ವಿವಾದದಲ್ಲಿ  ವಿದೇಶಾಂಗ ಸಚಿವಾಲಯ  ಮಿಶ್ರಾ ವಿರುದ್ಧ ಕ್ರಮ ಕೈಗೊಂಡಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಸುಷ್ಮಾ ಸ್ವರಾಜ್ ತೀವ್ರ ಟೀಕೆಗೆ ಗುರಿಯಾಗಿದ್ದರು. ವಿದೇಶಾಂಗ ಸಚಿವರನ್ನು ನಿಂದಿಸಿರುವಂತಹ ಕೆಲ ಟ್ವಿಟ್ ಗಳನ್ನು ಸಚಿವರು ಮರು ಟ್ವೀಟ್ ಮಾಡಿದ್ದಾರೆ.
 ಇಂತಹ ಟ್ರೋಲ್ ಗಳ  ವಿರುದ್ದ ಕ್ರಮ ಕೈಗೊಳ್ಳಲು ವಿದೇಶಾಂಗ ಸಚಿವಾಲಯ  ಚಿಂತನೆ ನಡೆಸುತ್ತಿದೆ.  ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂತಹ ದೋಷಪೂರಿತ ಟ್ವಿಟ್ ಗಳ ಬಗ್ಗೆ ಪ್ರತಿಕ್ರಿಯಿಸಿದೆ.
ಸಚಿವರು ತಮ್ಮದೇ ರೀತಿಯಲ್ಲಿ ಸೂಕ್ತವಾದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಹೆಚ್ಚಿಗೆ ಸೇರಿಸಲು ನಾನೂ ಯೋಚಿಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ  ವಕ್ತಾರ ರವೀಶ್ ಕುಮಾರ್  ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com