ಕಾರ್ತಿ ಚಿದಂಬರಂನನ್ನು ಸಿಬಿಐ ವಶಕ್ಕೆ ನೀಡಿರುವುದು ಸೂಕ್ತ ನಿರ್ಧಾರ: ಸುಬ್ರಮಣಿಯನ್ ಸ್ವಾಮಿ

ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ನೀಡಿರುವುದು ಸರಿಯಾದ ನಿರ್ಧಾರ ಎಂದು ಬಿಜೆಪಿ ಸಂಸದ ...
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ
Updated on: 
ನವದೆಹಲಿ: ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ನೀಡಿರುವುದು ಸರಿಯಾದ ನಿರ್ಧಾರ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಅವರನ್ನು ಕೋರ್ಟ್ ಸಿಬಿಐ ವಶಕ್ಕೆ ನೀಡಿರುವುದು ಸರಿಯಾದ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
ವಕೀಲ ಅಭಿಷೇಕ್ ಮನು ಸಿಂಘ್ವಿ ಕಾರ್ತಿ ಪರ ಏನೇ ವಾದ ಮಾಡಿದರೂ , ನ್ಯಾಯಾಲಯ ಅದ್ಯಾವುದನ್ನು ಪರಿಗಣಿಸದೇ ಸಿಬಿಐ ವಶಕ್ಕೆ ಕಳುಹಿಸಿದೆ.
ಕಾರ್ತಿ ವಿಚಾರಣೆಯಿಂದ ಚಿದಂಬರಂ ಅವರಿಗೂ ಈ ಪ್ರಕರಣಕ್ಕೂ ಸಂಬಂಧ ಇದೆಯೇ ಎಂಬುದರ  ಬಗ್ಗೆ ತಿಳಿದು ಬರುತ್ತದೆ. ಈಗಾಗಲೇ ಕಾರ್ತಿ ಸಿಎಂ ಅವರನ್ನು ಬಂಧಿಸಿರುವ ಸಿಬಿಐ ಅಧಿಕಾರಿಗಳು ಎಲ್ಲಾ ಮಾಹಿತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಚಿದಂಬರಂ ಯೋಜನೆಗೆ ಅನುಮೋದನೆ ನೀಡುವಾಗ ಅದರ ಮೌಲ್ಯ 5 ಕೋಟಿ ರು ಇತ್ತು, ಸಹಿ ಮಾಡಿದ ನಂತರ, ರು.305 ಕೋಟಿ ಆಗಿತ್ತು ಎಂದು ತಿಳಿಸಿದ್ದಾರೆ.  ಕಾರ್ತಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಭಿಷೇಕ್ ಸಿಂಗ್ವಿ ವಾದಿಸಿದರು, ಈ ವಾದಕ್ಕೆ ಯಾವುದೇ ಆಧಾರವಿಲ್ಲ ಎಂದು ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com