ಇದಕ್ಕೂ ಮೊದಲು ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರ ರಚನೆಗೆ ಮುಂದಾಗಿದ್ದು, ಯುನೈಟೆಡ್ ಡೆಮೋಕ್ರಟಿಕ್ ಪಕ್ಷ ಮತ್ತು ಪೀಪಲ್ಸ್ ಡೆಮೋಕ್ರಟಿಕ್ಸ್ ಪಕ್ಷದೊಂದಿಗೆ ಕೈ ಜೋಡಿಸಿ ಸರ್ಕಾರ ರಚನೆ ಮಾಡುವುದಾಗಿ ಘೋಷಣೆ ಮಾಡಿದೆ. ಯುನೈಟೆಡ್ ಡೆಮೋಕ್ರಟಿಕ್ ಪಕ್ಷ 6 ಸ್ಥಾನ ಹೊಂದಿದ್ದು, ಪೀಪಲ್ಸ್ ಡೆಮೋಕ್ರಟಿಕ್ಸ್ ಪಕ್ಷ ನಾಲ್ಕು ಸ್ಥಾನಗಳನ್ನು ಹೊಂದಿದೆ. ಈ ಎರಡೂ ಪಕ್ಷಗಳು ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಿದರೆ, ಮೈತ್ರಿಕೂಟದ ಸ್ಥಾನ 31 ಆಗಲಿದ್ದು, ಆಗ ಕಾಂಗ್ರೆಸ್ ಸರ್ಕಾರ ರಚನೆ ಮಾಡಬಹುದು. ಇದೇ ಕಾರಣಕ್ಕೆ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಅಹ್ಮದ್ ಪಟೇಲ್ ನೇತೃತ್ವದ ಕಾಂಗ್ರೆಸ್ ನಿಯೋಗ ಶಿಲ್ಲಾಂಗ್ ನಲ್ಲಿ ರಾಜ್ಯ ಪಾಲ ಗಂಗಾ ಪ್ರಸಾದ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಈ ವೇಳೆ ಹಿರಿಯ ಕಾಂಗ್ರೆಸ್ ಮುಖಂಡರಾದ ಕಮಲ್ ನಾಥ್, ಅಹ್ಮದ್ ಪಟೇಲ್, ಸಿಪಿ ಜೋಷಿ ಅವರು ಕೂಡ ಜೊತೆಯಲ್ಲಿದ್ದರು.