ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ಡೋಕ್ಲಾಮ್ ನಲ್ಲಿ ಚೀನಾದಿಂದ ಹೆಲಿಪ್ಯಾಡ್, ಮೂಲಸೌಕರ್ಯ ಕಾಮಗಾರಿ: ನಿರ್ಮಲಾ ಸೀತಾರಾಮನ್

ಡೊಕ್ಲಾಮ್ ನಲ್ಲಿ ವಿವಾದಿತ ಪ್ರದೇಶಗಳಿಂದ ದೂರದಲ್ಲಿ ಭಾರತ-ಚೀನಾ ತಮ್ಮ ಸೇನಾ ಸಿಬ್ಬಂದಿಗಳನ್ನು ನಿಯೋಜಿಸಿದ್ದು ಚೀನಾ ಹೆಲಿಪ್ಯಾಡ್ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಂಡಿದೆ
ನವದೆಹಲಿ: ಡೊಕ್ಲಾಮ್ ನಲ್ಲಿ ವಿವಾದಿತ ಪ್ರದೇಶಗಳಿಂದ ದೂರದಲ್ಲಿ ಭಾರತ-ಚೀನಾ ತಮ್ಮ ಸೇನಾ ಸಿಬ್ಬಂದಿಗಳನ್ನು ನಿಯೋಜಿಸಿದ್ದು ಚೀನಾ ಹೆಲಿಪ್ಯಾಡ್ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 
2017 ರಲ್ಲಿ ಉಂಟಾಗಿದ್ದ ಡೊಕ್ಲಾಮ್ ವಿವಾದದ ನಂತರ, ವಿವಾದಿತ ಪ್ರದೇಶದಲ್ಲಿ ನಿಯೋಜಿಸಿದ್ದಕ್ಕಿಂತ ದೂರದಲ್ಲಿ ಮತ್ತೊಮ್ಮೆ ಸೇನಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ, ಭಾರತ-ಚೀನಾ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದು, ತನ್ನ ಸಿಬ್ಬಂದಿಗಳ ನಿರ್ವಹಣೆಗಾಗಿ ಚೀನಾ ಹೆಲಿಪ್ಯಾಡ್ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತುಕೊಂಡಿವೆ ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಗೆ ತಿಳಿಸಿದ್ದಾರೆ. 
ಡೊಕ್ಲಾಮ್ ಭಾಗದಲ್ಲಿ ಚೀನಾ 7 ಹೆಲಿಪ್ಯಾಡ್ ಗಳನ್ನು ನಿರ್ಮಾಣ ಮಾಡಿದ್ದು, ಟ್ಯಾಂಕ್ ಹಾಗೂ ಕ್ಷಿಪಣಿಗಳನ್ನೂ ನಿಯೋಜಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದು, ಈ ವಿಷಯದ ಬಗ್ಗೆ ಚೀನಾದೊಂದಿಗೆ ಮಾತುಕತೆ ನಡೆದಿದೆಯೇ ಎಂಬ ಪ್ರಶ್ನೆಗೆ ಗಡಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ನಿರಂತರವಾಗಿ ಚೀನಾದೊಂದಿಗೆ ಚರ್ಚೆ ಮಾಡಲಾಗುತ್ತಿದೆ ಎಂದಷ್ಟೇ ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com