ಎಚ್ಚರಿಕೆ ಅಲ್ಲ, ಕೇವಲ ಜಾಗರೂಕತೆ: ಅಯೋಧ್ಯೆ ವಿವಾದ ಸಂಬಂಧ ಶ್ರೀ ಶ್ರೀ ರವಿಶಂಕರ್ ಸ್ಪಷ್ಟನೆ

ಅಯೋಧ್ಯ ವಿವಾದ ಸಂಬಂಧ ತನ್ನ ಹೇಳಿಕೆ ಎಚ್ಚರಿಕೆ ಅಲ್ಲ..ಅದು ಕೇವಲ ಜಾಗರೂಕತೆಯಷ್ಟೇ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥರಾದ ರವಿಶಂಕರ್ ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಯೋಧ್ಯ ವಿವಾದ ಸಂಬಂಧ ತನ್ನ ಹೇಳಿಕೆ ಎಚ್ಚರಿಕೆ ಅಲ್ಲ..ಅದು ಕೇವಲ ಜಾಗರೂಕತೆಯಷ್ಟೇ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥರಾದ ರವಿಶಂಕರ್ ಅವರು ಹೇಳಿದ್ದಾರೆ.
ಈ ಹಿಂದೆ ತಾವು ನೀಡಿದ್ದ ಹೇಳಿಕೆ ವಿವಾದಕ್ಕೀಡಾದ ಬೆನ್ನಲ್ಲೇ ಈ ಸಂಬಂಧ ಸ್ಪಷ್ಟನೆ ನೀಡಿರುವ ರವಿಶಂಕರ್ ಅವರು, ಅಯೋಧ್ಯೆ ವಿವಾದವನ್ನು ಸಾಧ್ಯವಾದಷ್ಟೂ ಬೇಗ ಇತ್ಯರ್ಥಪಡಿಸಿಬೇಕಿದೆ. ಈ ಸಂಬಂಧ ನಾನು ನೀಡಿದ್ದ ಹೇಳಿಕೆ ಕೇವಲ ಜಾಗರೂಕತೆಯಷ್ಟೇ.. ಅದು ಎಚ್ಚರಿಕೆ ಅಲ್ಲ. ಭಾರತ ಶಾಂತಿ ಪ್ರಿಯ ರಾಷ್ಟ್ರವಾಗಿದ್ದು, ಶಾಂತಿ ಕಾಪಾಡಿ.. ಮತ್ತೊಂದು ಸಿರಿಯಾ ಆಗುವುದು ಬೇಡ ಎಂದು ರವಿಶಂಕರ್ ಅವರು ಹೇಳಿದರು.
ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ರವಿಶಂಕರ್ ಅವರು, ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ವಿವಾದ ಇತ್ಯರ್ಥವಾಗದಿದ್ದರೆ ಭಾರತವು ಮುಂದೆ ಸಿರಿಯಾ ಆಗಿ ಮಾರ್ಪಡಲಿದೆ ಎಂದು ಹೇಳಿದ್ದರು. ಇಂಡಿಯಾ ಟುಡೇ ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಹೀಗೆ ಹೇಳಿದ್ದ ಶ್ರೀ ಶ್ರೀ, ""ವಿವಾದಿತ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಇಸ್ಲಾಂನಲ್ಲೇ ವಿರೋಧವಿದೆ. ಹಾಗಾಗಿ, ಮುಸ್ಲಿಮರು ಅಯೋಧ್ಯೆ ಬಗೆಗಿನ ತಮ್ಮ ಹಠ ಬಿಡಬೇಕು'' ಎಂದು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com