ಈಶಾನ್ಯ ಭಾಗದ ಜನರ ನಂಬಿಕೆ ಬದಲಾಗಿದೆ: ರಾಜನಾಥ್ ಸಿಂಗ್

ಈಶಾನ್ಯ ಭಾರತದಲ್ಲಿನ ನಂಬಿಕೆ ಮತ್ತು ಗ್ರಹಿಕೆ ಬದಲಾಗಿದ್ದು. ಕಾಂಗ್ರೆಸ್ ಪಕ್ಷ ಮಾತ್ರ ಗೆಲ್ಲಬಹುದು ಎಂಬ ನಂಬಿಕೆಯನ್ನು ಬಿಜೆಪಿ ಹೊಡೆದು ಹಾಕಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶಿಲ್ಲಾಂಗ್: ಈಶಾನ್ಯ ಭಾರತದಲ್ಲಿನ ನಂಬಿಕೆ ಮತ್ತು ಗ್ರಹಿಕೆ ಬದಲಾಗಿದ್ದು. ಕಾಂಗ್ರೆಸ್ ಪಕ್ಷ ಮಾತ್ರ ಗೆಲ್ಲಬಹುದು ಎಂಬ ನಂಬಿಕೆಯನ್ನು ಬಿಜೆಪಿ ಹೊಡೆದು ಹಾಕಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮೇಘಾಲಯ ರಾಜಧಾನಿ ಶಿಲ್ಲಾಂಗ್ ನಲ್ಲಿ ಇಂದು ನಡೆದ ಕನ್ರಾಡ್ ಸಂಗ್ಮಾ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕಾರ್ಯಾಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು, ಈಶಾನ್ಯ ಭಾರತದ ಜನರ ನಂಬಿಕೆ ಬದಲಾಗಿದ್ದು, ಇದೀಗ ಬಿಜೆಪಿ ಮೇಲೆ ಜನ ಭರವಸೆ ಇಟ್ಟಿದ್ದಾರೆ.  ಕಾಂಗ್ರೆಸ್ ಪಕ್ಷ ಮಾತ್ರವೇ ಗೆಲ್ಲಬಹುದು ಎಂಬ ನಂಬಿಕೆಯನ್ನು ಬಿಜೆಪಿ ಸುಳ್ಳು ಮಾಡಿದ್ದು. ಜನರ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಈಶಾನ್ಯದ ಮೂರು ರಾಜ್ಯಗಳಲ್ಲಿಯೂ ತನ್ನ ಮೈತ್ರಿಕೂಟದೊಂದಿಗೆ ಸರ್ಕಾರ ರಚನೆ ಮಾಡಿದೆ ಎಂದು ಹೇಳಿದರು.
ಇನ್ನು ಇತ್ತೀಚೆಗೆ ನಡೆದ ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 2 ಸ್ಥಾನಗಳು ಲಭಿಸಿದ್ದರೂ, ಎನ್ ಪಿಪಿ ಮತ್ತು ಇತರೆ ಮೂರು ಪಕ್ಷಗಳೊಂದಿಗೆ ಸೇರಿ ಬಿಜೆಪಿ ಕನ್ರಾಡ್ ಸಂಗ್ಮಾ ಅವರ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದೆ. ಇಂದು ಕನ್ರಾಡ್ ಸಂಗ್ಮಾ ಅವರು ಮೇಘಾಲಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com