ತಮಿಳುನಾಡು: ಬಿಜೆಪಿ ನಾಯಕನ ಬೆದರಿಕೆ ಬೆನ್ನಲ್ಲೇ ಪೆರಿಯಾರ್ ಪ್ರತಿಮೆ ಧ್ವಂಸ

ತಮಿಳುನಾಡು ಬಿಜೆಪಿ ನಾಯಕ ಎಚ್ ರಾಜಾ ಅವರು ಸಾಮಾಜಿಕ ತಾಣದಲ್ಲಿ ಬೆದರಿಕೆ ಹಾಕಿದ ಕೆಲವೇ ಗಂಟೆಗಳಲ್ಲಿ ವೆಲ್ಲೋರ್ ನಲ್ಲಿರುವ....
ಪೆರಿಯಾರ್
ಪೆರಿಯಾರ್
ಚೆನ್ನೈ: ತಮಿಳುನಾಡು ಬಿಜೆಪಿ ನಾಯಕ ಎಚ್ ರಾಜಾ ಅವರು ಸಾಮಾಜಿಕ ತಾಣದಲ್ಲಿ ಬೆದರಿಕೆ ಹಾಕಿದ ಕೆಲವೇ ಗಂಟೆಗಳಲ್ಲಿ ವೆಲ್ಲೋರ್ ನಲ್ಲಿರುವ ದ್ರಾವಿಡಿಯನ್ ಐಕಾನ್ ಮತ್ತು ಸಾಮಾಜಿಕ ಸುಧಾರಕ ಇವಿಆರ್ ರಾಮಸ್ವಾಮಿ(ಪೆರಿಯಾರ್) ಅವರ ಪ್ರತಿಯೆನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ತ್ರಿಪುರಾದಲ್ಲಿ 25 ವರ್ಷಗಳ ಎಡರಂಗದ ಆಳ್ವಿಕೆ ಅಂತ್ಯಗೊಂಡ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಲೆನಿನ್ ಪ್ರತಿಮೆಯನ್ನ ಹೊಡೆದುರುಳಿಸಿ ಅಟ್ಟಹಾಸ ಮೆರೆಯಲಾಗಿದೆ.  ಇದರ ಬೆನ್ನಲ್ಲೇ ತ್ರಿಪುರಾದಲ್ಲಿ ಕಮ್ಯುನಿಸ್ಟ್ ಕ್ರಾಂತಿಕಾರಿ  ಲೆನಿನ್ ಪ್ರತಿಮೆಗೆ ಆದ ಗತಿಯೇ ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆಗೆ ಆಗಲಿದೆ ಎಂದು ಎಚ್. ರಾಜಾ ಅವರು ಫೇಸ್ಬುಕ್ ಪೋಸ್ಟ್ ಹಾಕಿದ್ದರು.  ಅಲ್ಲದೆ ಪೆರಿಯಾರ್ ಒಬ್ಬ ಜಾತಿವಾದಿ, ಅವರ ಪ್ರತಿಮೆಯನ್ನ ಕಿತ್ತೊಗೆಯಬೇಕೆಂದು ಎಂದು ಉಲ್ಲೇಖಿಸಿದ್ದರು.
ಪೋಸ್ಟ್ ಹಾಕಿದ ನಂತರ ಇಬ್ಬರು ದುಷ್ಕರ್ಮಿಗಳು ಇಂದು ರಾತ್ರಿ 9 ಗಂಟೆಯ ಸುಮಾರಿಗೆ ವೆಲ್ಲೋರ್ ನಗರ ಪಾಲಿಕೆ ಕಚೇರಿಯಲ್ಲಿರುವ ಪೆರಿಯಾರ್ ಪ್ರತಿಯನ್ನು ಧ್ವಂಸಗೊಳಿಸಿದ್ದಾರೆ.
ಪ್ರತಿ ಧ್ವಂಸಗೊಳಿಸಿದ ವ್ಯಕ್ತಿಗಳನ್ನು ಮುತ್ತುರಾಮನ್ ಮತ್ತು ಫ್ರಾನ್ಸಿಸ್ ಎಂದು ಗರುತಿಸಲಾಗಿದ್ದು, ಕುಡಿತ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ತಮಿಳುನಾಡಿನ ಸಾಮಾಜಿಕ ಹೋರಾಟಗಾರ ಪೆರಿಯಾರ್ ಸ್ವಾಭಿಮಾನಿ ಚಳವಳಿ ಆರಂಭಿಸಿದ್ದರು. ದ್ರಾವಿಡ ರಾಜಕಾರಣದ ಪಿತಾಮಹ ಎಂದೇ ಇವರನ್ನ ಕರೆಯಲಾಗುತ್ತೆ.
ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದ ಬಳಿಕ ಕಮ್ಯುನಿಸ್ಟ್ ಕ್ರಾಂತಿಕಾರಿ ಲೆನಿನ್ ಪ್ರತಿಮೆಯನ್ನ ಜೆಸಿಬಿ ಬಳಸಿ ನೆಲ್ಲಕ್ಕುರುಳಿಸಲಾಗಿತ್ತು. ಬಿಜೆಪಿ ಕಾರ್ಯಕರ್ತರೇ ಎಸಗಿದ್ದಾರೆನ್ನಲಾದ ಇದೇ ಘಟನೆಯನ್ನ ಉಲ್ಲೇಖಿಸಿದ್ದ ರಾಜಾ, ತಮಿಳುನಾಡಿನಲ್ಲೂ ಮುಂದೆ ಇದೇ ರೀತಿ ಜಾತಿವಾದಿ ಪೆರಿಯಾರ್ ಪ್ರತಿಮೆ ಉರುಳಲಿದೆ ಎಂದು ಬರೆದುಕೊಂಡಿದ್ದರು.
ಎಚ್. ರಾಜಾ ಹೇಳಿಕೆಗೆ ಕಿಡಿ ಕಾರಿರುವ ಎಂಡಿಎಂಕೆ ಮುಖಂಡ ವೈಕೋ, ಪೆರಿಯಾರ್ ಪ್ರತಿಮೆ ಮುಟ್ಟಿದವರ ಕೈಗಳನ್ನ ಕತ್ತರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ಧಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com