ಪುರುಷ, ಮಹಿಳೆ ನಡುವಿನ ಸಮಾನತೆ ಸಮಾಜವನ್ನು ಶ್ರೀಮಂತವಾಗಿಸುತ್ತದೆ: ಪ್ರಧಾನಿ ಮೋದಿ

ಪುರುಷ ಹಾಗೂ ಮಹಿಳೆ ನಡುವಿನ ಸಮಾನತೆ ಸಮಾಜವನ್ನು ಮುನ್ನಡೆಸುವುದಲ್ಲದೆ, ಸಮಾಜವನ್ನು ಶ್ರೀಮಂತವಾಗಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
ಝುಂಝನು (ರಾಜಸ್ಧಾನ): ಪುರುಷ ಹಾಗೂ ಮಹಿಳೆ ನಡುವಿನ ಸಮಾನತೆ ಸಮಾಜವನ್ನು ಮುನ್ನಡೆಸುವುದಲ್ಲದೆ, ಸಮಾಜವನ್ನು ಶ್ರೀಮಂತವಾಗಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ. 
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ರಾಜಸ್ಥಾನದ ಝುಂಝುನುದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಬೇಟಿ ಬಚಾವೋ, ಬೇಟಿ ಪಡಾವೋ' ಅಭಿಯಾನದ ವಿಸ್ತರಣೆಗೆ ಚಾಲನೆ ನೀಡಿ ಮಾತನಾಡಿರುವ ಅವರು, ಬಾಲಕರಿಗೆ ನೀಡಲಾಗುತ್ತಿರುವ ಗುಣಮಟ್ಟದ ಶಿಕ್ಷಣದಂತೆಯೇ ಬಾಲಕಿಯರಿಗೂ ನೀಡಬೇಕು ಎಂದು ಹೇಳಿದ್ದಾರೆ. 
 ಪುರುಷ ಹಾಗೂ ಮಹಿಳೆ ನಡುವಿನ ಸಮಾನತೆ ಸಮಾಜವನ್ನು ಶ್ರೀಮಂತವಾಗಿಸುತ್ತದೆ. ಹುಟ್ಟುವ ಗಂಡುವಿನ ಸಂಖ್ಯೆಯಷ್ಟೇ ಹೆಣ್ಣು ಮಕ್ಕಳೂ ಕೂಡ ಜನಿಸಲಿ. ಗಂಡು ಹಾಗೂ ಹೆಣ್ಣು ಮಕ್ಕಳನ್ನು ಒಂದೇ ರೀತಿಯಲ್ಲಿ ನೋಡೋಣ ಎಂದು ತಿಳಿಸಿದ್ದಾರೆ. 
ಹೆಣ್ಣು ಮಕ್ಕಳನ್ನು ಹೊರೆಯಲ್ಲ. ಹೆಣ್ಣು ಮಕ್ಕಳು ಕುಟುಂಬದ ಹಾಗೂ ದೇಶದ ಹೆಮ್ಮೆ. ಸಾಮಾಜಿಕ ಕ್ರಾಂತಿಯನ್ನು ತರಬೇಕು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com