ಶೇ.100ರಷ್ಟು ಬಯೋ ಡಿಗ್ರೇಡೆಬಲ್ ಸ್ಯಾನಿಟರ್ ನ್ಯಾಪ್ಕಿನ್ ಬಿಡುಗಡೆ

ಮಹಿಳಾ ದಿನಾಚರಣೆ ವಿಶೇಷವಾಗಿ ಕೇಂದ್ರ ಸರ್ಕಾರ ಅತ್ಯಂತ ಅಗ್ಗದ ಮತ್ತು ಗುಣಮಟ್ಟದ ಶೇ.100ರಷ್ಟು ಬಯೋ ಡಿಗ್ರೇಬಲ್ ಸ್ಯಾನಿಟರ್ ನ್ಯಾಪ್ಕಿನ್ ಗಳನ್ನು ಗುರುವಾರ ಬಿಡುಗಡೆ ಮಾಡಿದೆ.
'ಸುವಿಧಾ'  ಸ್ಯಾನಿಟರಿ ನ್ಯಾಪ್ಕಿನ್ ಬಿಡುಗಡೆ ಮಾಡಿದ ಕೇಂದ್ರ ಸಚಿವ ಅನಂತ್ ಕುಮಾರ್
'ಸುವಿಧಾ' ಸ್ಯಾನಿಟರಿ ನ್ಯಾಪ್ಕಿನ್ ಬಿಡುಗಡೆ ಮಾಡಿದ ಕೇಂದ್ರ ಸಚಿವ ಅನಂತ್ ಕುಮಾರ್
ನವದೆಹಲಿ: ಮಹಿಳಾ ದಿನಾಚರಣೆ ವಿಶೇಷವಾಗಿ ಕೇಂದ್ರ ಸರ್ಕಾರ ಅತ್ಯಂತ ಅಗ್ಗದ ಮತ್ತು ಗುಣಮಟ್ಟದ ಶೇ.100ರಷ್ಟು ಬಯೋ ಡಿಗ್ರೇಬಲ್ ಸ್ಯಾನಿಟರ್ ನ್ಯಾಪ್ಕಿನ್ ಗಳನ್ನು ಗುರುವಾರ ಬಿಡುಗಡೆ ಮಾಡಿದೆ.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರು 'ಸುವಿಧಾ' ಎಂಬ ಶೇ.100ರಷ್ಟು ಬಯೋ ಡಿಗ್ರೇಬಲ್ ಸ್ಯಾನಿಟರ್ ನ್ಯಾಪ್ಕಿನ್ ಅನ್ನು ಬಿಡುಗಡೆ ಮಾಡಿದರು. ಸುವಿಧಾ ನ್ಯಾಪ್ಕಿನ್ ಗಳು ಸಂಪೂರ್ಣ ಆರ್ಗ್ಯಾನಿಕ್ ಪ್ಯಾಡ್ ಗಳಾಗಿದ್ದು, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕಾರ್ಯಕ್ರಮದಡಿಯಲ್ಲಿ ಕೇಂದ್ರ ಸರ್ಕಾರ ಈ ವಿಶೇಷ ನ್ಯಾಪ್ಕಿನ್ ಗಳನ್ನು ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರವು ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಮಾರಾಟ ವ್ಯವಸ್ಥೆ ಮಾಡಿದೆ. ಇದರ ಬೆಲೆ ಪ್ರತೀ ನ್ಯಾಪ್ಕಿನ್ ಗೆ ಕೇವಲ 2.50 ರೂ ಗಳಾಗಿದ್ದು, ಜನೌಷಧಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತದೆ. 
ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಅವರು, ಖಾಸಗಿ ಕಂಪೆನಿಗಳ ಪ್ರತಿ ನ್ಯಾಪ್ಕಿನ್ ಕನಿಷ್ಠ ರೂ. 8ಕ್ಕೆ ದೊರೆಯುತ್ತಿದ್ದು, ಸುಲಭದ ದರದಲ್ಲಿ ಪೂರೈಸಲು ಕೇಂದ್ರ ಕ್ರಮ ಕೈಗೊಂಡಿದೆ. ಶೇ 100ರಷ್ಟು ಆಕ್ಸೊ ಬಯೊ ಡಿಗ್ರೇಡೆಬಲ್ ನ್ಯಾಪ್ಕಿನ್ ಪೂರೈಸುವುದರಿಂದ ಪರಿಸರಕ್ಕೂ ಯಾವುದೇ ರೀತಿಯ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು. ದೇಶದಾದ್ಯಂತ ಇರುವ 3200ಕ್ಕೂ ಅಧಿಕ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಜನರಿಕ್ ಔಷಧಿ ಮಾರಾಟ ಮಾಡಲಾಗುತ್ತಿದ್ದು, ವಾರ್ಷಿಕ 600 ಕೋಟಿ ರೂಪಾಯಿ (equivalent) ವ್ಯವಹಾರ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಜನೌಷಧಿ ಕೇಂದ್ರಗಳು ಆರಂಭವಾಗಲಿವೆ. ಕೇಂದ್ರ ಸರ್ಕಾರದ ಯೋಜನೆಯಿಂದ ಖಾಸಗಿ ಕಂಪೆನಿಗಳೂ ಸ್ಪರ್ಧಾತ್ಮಕ ದರವನ್ನು ನೀಡುವ‌ ಮೂಲಕ ಕಡಿಮೆ ದರದಲ್ಲಿ ನ್ಯಾಪ್ಕಿನ್ ಮಾರಾಟ ಮಾಡಲು ಮುಂದಾಗಲಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com