ಶಿಶುವಿಗೆ ಸ್ತನಪಾನ ಮೌಲ್ಯ ಮೆರೆದ ಮಲಯಾಳಂ 'ಗೃಹಲಕ್ಷ್ಮಿ' ನಿಯತಕಾಲಿಕೆಗೆ ಪೆಟಾ ಗೌರವ

ಶಿಶುವಿಗೆ ಸ್ತನಪಾನ ಮೌಲ್ಯ ತೋರುವ ಉದ್ದೇಶದಿಂದ ಈ ಹಿಂದೆ ಮುಖಪುಟದಲ್ಲಿ ಸ್ತನ್ಯಪಾನ ಫೋಟೋ ಪ್ರಕಟಿಸಿದ್ದ ಮಲಯಾಳಂನ ಗೃಹಲಕ್ಷ್ಮಿ ನಿಯತಕಾಲಿಕೆಗೆ ಖ್ಯಾತ ಪ್ರಾಣಿ ದಯಾ ಸಂಘಟನೆ ಪೆಟಾ ಗೌರವ ಸಲ್ಲಿಕೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಶಿಶುವಿಗೆ ಸ್ತನಪಾನ ಮೌಲ್ಯ ತೋರುವ ಉದ್ದೇಶದಿಂದ ಈ ಹಿಂದೆ ಮುಖಪುಟದಲ್ಲಿ ಸ್ತನ್ಯಪಾನ ಫೋಟೋ ಪ್ರಕಟಿಸಿದ್ದ ಮಲಯಾಳಂನ ಗೃಹಲಕ್ಷ್ಮಿ ನಿಯತಕಾಲಿಕೆಗೆ ಖ್ಯಾತ ಪ್ರಾಣಿ ದಯಾ ಸಂಘಟನೆ ಪೆಟಾ ಗೌರವ ಸಲ್ಲಿಕೆ ಮಾಡಿದೆ.
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಪೀಪಲ್ ಫಾರ್ ದ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಸಂಸ್ಥೆ ಗೃಹಲಕ್ಷ್ಮೀ ನಿಯತಕಾಲಿಕೆಯನ್ನು ಗೌರವಿಸಿದೆ. ತನ್ನ ಸಂಸ್ಥೆಯ ವತಿಯಿಂದ ನೀಡಲಾಗುವ 'ಗುಡ್ ಮದರ್ ಪ್ರಶಸ್ತಿ'ಯನ್ನು 2018ನೇ ಸಾಲಿನಲ್ಲಿ ಗೃಹಲಕ್ಷ್ಮೀ ನಿಯತಕಾಲಿಕೆಗೆ ನೀಡಿ ಗೌರವಿಸಲಾಗಿದೆ.  ಈ ಬಗ್ಗೆ ಮಾತನಾಡಿರುವ ಪೆಟಾ ವಕ್ತಾರರಾದ ನೇಹಾ ಸಿಂಗ್ ಅವರು, ಭೂಮಿ ಮೇಲಿರುವ ಪ್ರತಿಯೊಂದು ಪ್ರಾಣಿಗೂ ಅಥವಾ ಪ್ರತಿಯೊಂದು ನವಜಾತ ಶಿಶುವಿಗೂ ತಾಯಿ ಎದೆಹಾಲು ಅತ್ಯಂತ ಅತ್ಯುತ್ತಮ ಮೊದಲ ನೈಸರ್ಗಿಕ ಆಹಾರವಾಗಿರುತ್ತದೆ. ಹೀಗಾಗಿ ಮಹಿಳೆಯರು ತಮ್ಮ ಮಕ್ಕಳಿಗೆ ಎದೆಹಾಲುಣಿಸಲು ಹೆಮ್ಮೆ ಪಡಬೇಕು ಎಂದು ಹೇಳಿದ್ದಾರೆ.
ಬಾಟಲಿ ಹಾಲು ಅಂದರೆ ಹಸು ಮತ್ತು ಎಮ್ಮೆ ಹಾಲುಗಳೂ ಕೂಡ ಒಳ್ಳೆಯವೇ ಆದರೂ ತಾಯಿಯ ಎದೆ ಹಾಲಿನಷ್ಟು ನೈಸರ್ಗಿಕವಾಗಿ ಉತ್ತಮವಾಗಿರುವುದಿಲ್ಲ. ಇಂತಹ ಹಾಲುಣಿಸುವುದಿರಿಂದ ಮಕ್ಕಳಲ್ಲಿ ನಿರ್ಜಲೀಕರಣ, ಬೇದಿ, ಜ್ವರದಂತಹ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಡೈರಿ ಹಾಲು ಅಥವಾ ಇತರೆ ವಸ್ತುಗಳು ಕಳಪೆ ನೀರಿನಿಂದಾಗಿ ಮಕ್ಕಳಲ್ಲಿ ಆನಾರೋಗ್ಯ ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳಿಗೆ ತಾಯಿ ಎದೆ ಹಾಲುಣಿಸುವ ಕುರಿತು ಜಾಗೃತಿ ಇನ್ನೂ ಹೆಚ್ಚಿನ ಮಟ್ಟದಲ್ಲಾಗಬೇಕಿದೆ. ನಿಗದಿತ ವರ್ಷಗಳವರೆಗೂ ಮಕ್ಕಳಿಗೆ ತಾಯಿ ಎದೆಹಾಲುಣಿಸುತ್ತಿದ್ದರೆ ಮಕ್ಕಳಲ್ಲಿ ಸಣ್ಣವಯಸ್ಸಿನಲ್ಲೇ ಸಕ್ಕರೆ ಖಾಯಿಲೆ, ಅಲರ್ಜಿ, ಬೊಜ್ಜು, ಹೃದಯದ ಸಮಸ್ಯೆ ಮತ್ತು ಕ್ಯಾನ್ಸರ್ ನಂತಹ ಸಮಸ್ಯೆಗಳನ್ನು ತಡೆಯಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com