ಆರ್‏ಎಸ್ಎಸ್ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ 'ಭಯ್ಯಾಜಿ' ಜೋಶಿ ಪುನರಾಯ್ಕೆ

ಭಯ್ಯಾಜಿ ಎಂದೇ ಪ್ರಸಿದ್ಧರಾದ ಸುರೇಶ್ ಜೋಷಿ, ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ( ಆರ್ ಎಸ್ ಎಸ್ ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಇಂದು ಪುನರ್ ಆಯ್ಕೆಯಾಗಿದ್ದಾರೆ.
ಸುರೇಶ್ ಜೋಷಿ
ಸುರೇಶ್ ಜೋಷಿ

ನವದೆಹಲಿ: ಭಯ್ಯಾಜಿ ಎಂದೇ ಪ್ರಸಿದ್ಧರಾದ ಸುರೇಶ್ ಜೋಶಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ( ಆರ್ ಎಸ್ ಎಸ್ )  ಪ್ರಧಾನ ಕಾರ್ಯದರ್ಶಿಯಾಗಿ ಇಂದು ಪುನರ್ ಆಯ್ಕೆಯಾಗಿದ್ದಾರೆ.

ಜೋಶಿ,  9 ವರ್ಷಗಳಿಂದಲೂ ವಿವಾದದ ನಡುವೆಯೂ  ಪ್ರಧಾನ ಕಾರ್ಯದರ್ಶಿಯಾಗಿ  ಕಾರ್ಯನಿರ್ವಹಿಸುತ್ತಿದ್ದು,  ಆರ್ ಎಸ್ ಎಸ್ ನ ದಿನನಿತ್ಯದ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.  ಈಗ ಮತ್ತೆ ಮೂರು ವರ್ಷಗಳ ಅವಧಿಗೆ ಅವರನ್ನು ಪುನರ್ ಆಯ್ಕೆ ಮಾಡಲಾಗಿದೆ.

ಆರ್ ಎಸ್ ಎಸ್ ನ ಅಖಿಲ ಭಾರತೀಯ ಪ್ರಾತಿನಿಧಿ ಸಭಾದ  ಎರಡನೇ ದಿನದ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ.ನಾಗಪುರದಲ್ಲಿನ ಹೆಡ್ಗೇವರ್ ಸ್ಮಾರಕ ಸಮಿತಿಯಲ್ಲಿ ಈ ಸಭೆಗೆ  ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು  ನಿನ್ನೆ ಚಾಲನೆ ನೀಡಿದ್ದರು.

ಇಂದಿನ ಕಾರ್ಯಕ್ರಮದಲ್ಲಿ ದೇಶಾದ್ಯಂತ ಆಗಮಿಸಲಿರುವ ಸುಮಾರು ಆಯ್ದ 1.500 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಎಬಿಪಿಎಸ್ ಪ್ರಚಾರ ಪ್ರಮುಖ ಡಾ. ಮನಮೋಹನ್ ವೈದ್ಯ  ತಿಳಿಸಿದ್ದರು.

 ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪ್ರಧಾನ ಕಾರ್ಯದರ್ಶಿಯನ್ನು ಆಯ್ದ ಪ್ರತಿನಿಧಿಗಲು ಆಯ್ಕೆ ಮಾಡಲಿದ್ದಾರೆ ಎಂದು ವೈದ್ಯ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com