ಬಿಜೆಪಿ ಜೊತೆ ಮೈತ್ರಿ ಕಡಿದುಕೊಂಡಿಲ್ಲ, ಆದರೆ ನಮ್ಮ ಹೋರಾಟ ಮುಂದುವರೆಯುತ್ತದೆ: ಟಿಡಿಪಿ

ಬಿಜೆಪಿ ಜೊತೆಗಿನ ಮೈತ್ರಿ ಇನ್ನೂ ಕಡಿತವಾಗಿಲ್ಲ. ಮೈತ್ರಿ ಈಗಲೂ ಮುಂದುವರೆದಿದೆಯಾದರೂ, ಆಂಧ್ರ ಪ್ರದೇಶ ವಿಶೇಷ ಸ್ಥಾನಮಾನಕ್ಕಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಟಿಡಿಪಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಮರಾವತಿ: ಬಿಜೆಪಿ ಜೊತೆಗಿನ ಮೈತ್ರಿ ಇನ್ನೂ ಕಡಿತವಾಗಿಲ್ಲ. ಮೈತ್ರಿ ಈಗಲೂ ಮುಂದುವರೆದಿದೆಯಾದರೂ, ಆಂಧ್ರ ಪ್ರದೇಶ ವಿಶೇಷ ಸ್ಥಾನಮಾನಕ್ಕಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಟಿಡಿಪಿ ಹೇಳಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಆಂಧ್ರ ಪ್ರದೇಶ ವಿತ್ತ ಸಚಿವ ಯನಮಾಲ ರಾಮಕೃಷ್ಣುಡು ಅವರು, ಎನ್ ಡಿಎ ಮೈತ್ರಿಕೂಟದೊಂದಿಗಿನ ನಮ್ಮ ಮೈತ್ರಿ ಸಂಪೂರ್ಣವಾಗಿ ಕಡಿತವಾಗಿಲ್ಲ. ಆದರೆ ಬಿಜೆಪಿಯ ಕೆಲ ನಿರ್ಧಾರಗಳು ನಮಗೆ ತೀವ್ರ ನೋವುಂಟು ಮಾಡಿದೆ. ಇತ್ತ ನಾವು ಆಂಧ್ರ ಪ್ರದೇಶಕ್ಕಾಗಿ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸುತ್ತಿದ್ದರೆ ಅತ್ತ ಅರುಣ್ ಜೇಟ್ಲಿ ಅವರು ಆರ್ಥಿಕ ನೆರವು ನೀಡುವುದಾಗಿ ಹೇಳುವ ಮೂಲಕ ನಮ್ಮ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಹೇಳಿದರು. 
ಇನ್ನು ಎನ್ ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ಆಗ್ರಹಿಸಿದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಹೇಳಿಕೆಯನ್ನು ಅನೈತಿಕ ಎಂದು ಟೀಕಿಸಿದ ಅವರು, ಸಾಧ್ಯವಾದರೆ ನಮ್ಮ ಹೋರಾಟಕ್ಕೆ ಕೈ ಜೋಡಿಸಿ ಎಂದು ಹೇಳಿದರು. ಅಂತೆಯೇ ಆಂಧ್ರ ಪ್ರದೇಶಕ್ಕೆ ಕೇಂದ್ರ ಸರ್ಕಾರ ನೀಡಿರುವ ಯೋಜನೆಗಳು ಮತ್ತು ನೀಡಿದ್ದೇವೆ ಎಂದು ಹೇಳುತ್ತಿರುವ ಯೋಜನೆಗಳ ಸಂಪೂರ್ಣ ಮಾಹಿತಿ ನೀಡುವ ಮೂಲಕ ಬಿಜೆಪಿಯ ಪಕ್ಷಪಾತ ಧೋರಣೆಯನ್ನು ಬಯಲು ಮಾಡುವುದಾಗಿಯೂ ಅವರು ಎಚ್ಚರಿಕೆ ನೀಡಿದರು.
2014ರಲ್ಲಿ ಆಂಧ್ರ ಪ್ರದೇಶ ಮರುಸಂಘಟನಾ ಕಾಯ್ದೆ ಜಾರಿ ಮಾಡಿದ್ದ ಕೇಂದ್ರ ಸರ್ಕಾರ, ಅಂದು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಹೀಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಟಿಡಿಪಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com