ಪ್ರಧಾನಿ ಮೋದಿ ಶಿಫಾರಸಿನ ಬಳಿಕವೂ ಬಡಗಿಗೆ ಸಾಲ ನೀಡಲು ಬ್ಯಾಂಕ್ ನಕಾರ

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಾವೇ ಸ್ವತಃ ತಮ್ಮ ಕೈಗಳಿಂದ ಮರದ ಮೇಲೆ ಕೆತ್ತಿದ ಭಗವದ್ಗೀತೆಯನ್ನು ಉಡುಗೊರೆಯಾಗಿ ಕೊಟ್ಟು ಹೆಸರು ಮಾಡಿದ್ದ ಕಾನ್ಪುರ ಮೂಲದ ಬಡಗಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ...
ಪ್ರಧಾನಿ ಮೋದಿ ಶಿಫಾರಸಿನ ಬಳಿಕವೂ ಬಡಗಿಗೆ ಸಾಲ ನೀಡಲು ಬ್ಯಾಂಕ್ ನಕಾರ
ಪ್ರಧಾನಿ ಮೋದಿ ಶಿಫಾರಸಿನ ಬಳಿಕವೂ ಬಡಗಿಗೆ ಸಾಲ ನೀಡಲು ಬ್ಯಾಂಕ್ ನಕಾರ
ಕಾನ್ಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಾವೇ ಸ್ವತಃ ತಮ್ಮ ಕೈಗಳಿಂದ ಮರದ ಮೇಲೆ ಕೆತ್ತಿದ ಭಗವದ್ಗೀತೆಯನ್ನು ಉಡುಗೊರೆಯಾಗಿ ಕೊಟ್ಟು ಹೆಸರು ಮಾಡಿದ್ದ ಕಾನ್ಪುರ ಮೂಲದ ಬಡಗಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಡಗಿಗೆ ಸಾಲ ನೀಡುವಂತೆ ಸ್ವತಃ ಮೋದಿಯವರೇ ಶಿಫಾರಸು ಮಾಡಿದ್ದರು ಸಾಲ ನೀಡಲು ಬ್ಯಾಂಕ್ ನಿರಾಕರಿಸಿದೆ ಎಂದು ತಿಳಿದುಬಂದಿದೆ. 
ನನ್ನ ಕೆಲಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತೋರಿಸಿದ್ದೇನೆ. ಬಳಿಕ ಸ್ವತ ಮೋದಿಯವರೇ ವೈಯಕ್ತಿಕವಾಗಿ ಪ್ರಧಾನಮಂತ್ರಿಗಳ ಉದ್ಯೋಗ ಸೃಜನಯಡಿಯಲ್ಲಿ (ಪಿಎಂಇಜಿಪಿ) ಸಾಲ ನೀಡುವಂತೆ ಶಿಫಾರಸು ಮಾಡಿದ್ದರು. ಆದರೆ, ಬ್ಯಾಂಕ್ ಸಾಲ ನೀಡಲು ನಿರಾಕರಿಸುತ್ತಿದೆ ಎಂದು ಬಡಡಗಿ ಸಂದೀಪ್ ಸೋನಿಯವರು ಹೇಳಿಕೊಂಡಿದ್ದಾರೆ. 
ಸಾಲ ನೀಡಲು ಬ್ಯಾಂಕ್ ನಿರಾಕರಿಸುತ್ತಿರುವ ಹಿನ್ನಲೆಯಲ್ಲಿ ಸಂದೀಪ್ ಅವರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ಬ್ಯಾಂಕ್ ಅಧಿಕಾರಿಗಳನ್ನು ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದು, ಇದರಿಂದ ಉದ್ಯಮ ನಡೆಸಲು ಸಾಧ್ಯವಾಗುತ್ತಿಲ್ಲ. 
ಬ್ಯಾಂಕ್ ಆಫ್ ಬರೋಡಾದ ಅಧಿಕಾರಿಗಳು ಉದ್ಯಮಕ್ಕೆ ರೂ.10 ಲಕ್ಷ ಸಾಲ ನೀಡುವುದಾಗಿ ಹೇಳುತ್ತಿದ್ದಾರೆ. ರೂ.25 ಲಕ್ಷ ಸಾಲ ನೀಡಲು ನಿರಾಕರಿಸುತ್ತಿದ್ದಾರೆ. ಹಣದ ಕೊರತೆಯಿಂದಾಗಿ ನನ್ನ ಕೆಲಸ ನಿಂತು ಹೋಗಿದೆ. ನನ್ನ ಉದ್ಯಕ್ಕೆ ರೂ.25 ಲಕ್ಷ ಅಗತ್ಯವಿದೆ. ಬ್ಯಾಂಕ್ ಕೇವಲ ರೂ.10 ಲಕ್ಷ ನೀಡುವುದಾಗಿ ಹೇಳುತ್ತಿದೆ. ಪ್ರತೀಯೊಂದು ದಿನವೂ ಒಂದಲ್ಲ ಒಂದು ನಿಯಮಗಳನ್ನು ಹೇಳುತ್ತಿರುತ್ತಾರೆಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com