ಹವಾಮಾನ ವೈಫರೀತ್ಯ ಎದುರಿಸಲು ವೇದಗಳಿಗೆ ಹಿಂದಿರುಗಿ- ಪ್ರಧಾನಿ ನರೇಂದ್ರಮೋದಿ ಕರೆ

ಹವಾಮಾನ ವೈಫರೀತ್ಯ ಎದುರಿಸಲು ವೇದಗಳಿಗೆ ಹಿಂದಿರುಗಿ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರಮೋದಿ
ಪ್ರಧಾನಿ ನರೇಂದ್ರಮೋದಿ

ನವದೆಹಲಿ : ಹವಾಮಾನ ವೈಫರೀತ್ಯ ಎದುರಿಸಲು ವೇದಗಳಿಗೆ ಹಿಂದಿರುಗಿ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

ದೆಹಲಿಯ ರಾಷ್ಟ್ರಪತಿಭವನದಲ್ಲಿಂದು  ಅಂತಾರಾಷ್ಟ್ರೀಯ ಸೋಲಾರ್  ಮೈತ್ರಿ ಶೃಂಗಸಭೆಯಲ್ಲಿ  ಮಾತನಾಡಿದ ಅವರು,  ಸೂರ್ಯ ವಿಶ್ವದ ಆತ್ಮ ಎಂದು ವೇದಗಳಲ್ಲಿ ಪರಿಗಣಿಸಲಾಗಿದ್ದು,  ಜೀವನ ಪೋಷಕವೂ ಆಗಿದೆ.  ಪ್ರಸ್ತುತ ನಾವು ಎದುರಿಸುತ್ತಿರುವ ಹವಮಾನ ವೈಫರೀತ್ಯ ಎದುರಿಸಲು ಪ್ರಾಚೀನ ಯೋಜನೆಗಳತ್ತ ಗಮನ ಹರಿಸಬೇಕಾದ ಅಗತ್ಯ ಹೆಚ್ಚಾಗಿದೆ ಎಂದರು. ಸೌರಶಕ್ತಿ ಬಳಕೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಸಲಹೆ ನೀಡಿದರು.

 ತಂತ್ರಜ್ಞಾನ ಲಭ್ಯತೆ, ಆರ್ಥಿಕ ಸಂಪನ್ಮೂಲ, ಬೆಲೆಯಲ್ಲಿ ಕಡಿತ, ಸಂಗ್ರಹ ತಂತ್ರಜ್ಞಾನದ ಅಭಿವೃದ್ಧಿ, ಸಾಮೂಹಿಕ ಉತ್ಪಾದನೆ  ಮೂಲಕ ಸೌರ ಶಕ್ತಿ ಬಳಕೆಯನ್ನು ಪ್ರೋತ್ಸಾಹಿಸಬೇಕು , ಎಲ್ಲಾರೂ ಒಂದಾದರೆ ಹವಾಮಾನ ವೈಫರೀತ್ಯ ಸಮಸ್ಯೆ ಬಗೆಹರಿಸಬಹುದು . ಭಾರತ ಭಾರತ ಸೋಲಾರ್ ಟೆಕ್ನಾಲಜಿ ಮಿಷನ್ ಆರಂಭಿಸಲಿದೆ ಎಂದು ಪ್ರಧಾನಿ ತಿಳಿಸಿದರು.
 
ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರಾನ್ , ವಿಶ್ವಸಂಸ್ಥೆ ಕಾರ್ಯದರ್ಶಿ  ಜನರಲ್ ಅಂಥೋನಿಯೊ ಗುಟೆರ್ಸ್ , ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ,ಸೇರಿದಂತೆ ವಿವಿಧ ದೇಶಗಳ 50 ಗಣ್ಯರು ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com