ಆರ್‌ಬಿಐಗೆ ನಕಲಿ ನೋಟು ರವಾನಿಸುತ್ತಿದ್ದ ಎಸ್‌ಬಿಐ ಮ್ಯಾನೆಜರ್ ವಿರುದ್ಧ ಎಫ್ಐಆರ್

ರಿಸರ್ವ್ ಬ್ಯಾಂಕ್ ಆಫ್‌ ಇಂಡಿಯಾ(ಆರ್‌ಬಿಐ)ಗೆ ನಕಲಿ ನೋಟು ರವಾನಿಸುತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ದ ಬ್ಯಾಂಕ್ ವ್ಯವಸ್ಥಾಪಕನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಜಾಫರನಗರ: ರಿಸರ್ವ್ ಬ್ಯಾಂಕ್ ಆಫ್‌ ಇಂಡಿಯಾ(ಆರ್‌ಬಿಐ)ಗೆ ನಕಲಿ ನೋಟು ರವಾನಿಸುತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ದ ಬ್ಯಾಂಕ್ ವ್ಯವಸ್ಥಾಪಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 
ಕಾನ್ಪುರ ಬ್ರಾಂಚ್ ನ ಆರ್‌ಬಿಐ ಶಾಖೆ ವ್ಯವಸ್ಥಾಪಕ ಸಟಿ ಕುಮಾರ್ ಅವರ ದೂರಿನನ್ವಯ ಎಸ್‌ಬಿಐ ವ್ಯವಸ್ಥಾಪಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನವೆಂಬರ್ 8ರಂದು ದೇಶಾದ್ಯಂತ 1 ಸಾವಿರ ಹಾಗೂ 500 ರುಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನೋಟು ಬದಲಾವಣೆಗೆ ಅವಕಾಶ ನೀಡಿತ್ತು. ಅಂತೆ ಇದನ್ನು ಬಂಡವಾಳ ಮಾಡಿಕೊಂಡ ಬ್ಯಾಂಕ್ ಮ್ಯಾನೆಜರ್ ಆರ್‌ಬಿಐಗೆ 1 ಸಾವಿರ ಹಾಗೂ 500 ರುಪಾಯಿ ನಕಲಿ ನೋಟುಗಳನ್ನು ರವಾನಿಸುತ್ತಿದ್ದರು ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com