ಪತಿಯ ಜೊತೆ ಜೀವನ ಸಾಗಿಸಲು 'ಸ್ವಾತಂತ್ರ್ಯ' ನೀಡಿದ ಸುಪ್ರೀಂ ಕೋರ್ಟ್ ಗೆ ಹಾದಿಯಾ ಧನ್ಯವಾದ

ತನ್ನ ಪತಿಯ ಜೊತೆ ಮುಸಲ್ಮಾನಳಾಗಿ ಬದುಕಲು ಅವಕಾಶ ನೀಡಿ ತೀರ್ಪು ಕೊಟ್ಟ ಸುಪ್ರೀಂ ...
ಹಾದಿಯಾ
ಹಾದಿಯಾ

ತಿರುವನಂತಪುರಂ: ತನ್ನ ಪತಿಯ ಜೊತೆ ಮುಸಲ್ಮಾನಳಾಗಿ ಬದುಕಲು ಅವಕಾಶ ನೀಡಿ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್ ಗೆ ಹಾದಿಯಾ ಧನ್ಯವಾದ ಹೇಳಿದ್ದಾಳೆ.

ನನಗೆ ಈಗ ಸ್ವಾತಂತ್ರ್ಯ ಸಿಕ್ಕಿರುವುದು ತುಂಬಾ ಖುಷಿಯಾಗಿದೆ. ನಾನು ಸುಪ್ರೀಂ ಕೋರ್ಟ್ ಗೆ ಎರಡು ಬಾರಿ ಮೊರೆ ಹೋದೆ. ಒಂದು, ನಾನು ಮುಸಲ್ಮಾನಳಾಗಿ ಬದುಕಲು ಮತ್ತು ಇನ್ನೊಂದು ನನ್ನ ಪತಿಯ ಜೊತೆ ಜೀವನ ನಡೆಸಲು ಎಂದು ಇಂದು ತಿರುವನಂತಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದಳು.

ನಾನು ಮನೆಯಲ್ಲಿದ್ದಾಗ ಹೊರಜಗತ್ತಿನಲ್ಲಿ ಏನಾಗುತ್ತದೆ ಎಂದು ಗೊತ್ತಾಗುತ್ತಿರಲಿಲ್ಲ. ಅಕ್ಷರಶಃ ಗೃಹಬಂಧನದಲ್ಲಿದ್ದೆ. ಆರು ತಿಂಗಳು ಕಳೆದ ನಂತರ ಹೊರಗೆ ಬಂದಾಗ ಹೊಸ ಜಗತ್ತನ್ನೇ ಕಂಡಂತಾಯಿತು ಎನ್ನುತ್ತಾರೆ.

ಹಾದಿಯಾ - ಶಫಿನ್ ಜಹನ್ ಮದುವೆಯನ್ನು ಮಾನ್ಯ ಮಾಡಿ ಒಪ್ಪಿಗೆ ನೀಡಿ ತೀರ್ಪು ನೀಡಿರುವುದು ಹಾದಿಯಾ ಸಂತೋಷವನ್ನು ಇಮ್ಮಡಿಸಿದೆ. ಕಳೆದ ವರ್ಷ ಕೇರಳ ಹೈಕೋರ್ಟ್ ಹದಿಯಾ ವಿವಾಹವನ್ನು ಅಸಿಂಧುಗೊಳಿಸಿತ್ತು.

ಹಿಂದೂ ಕುಟುಂಬದಲ್ಲಿ ಜನಿಸಿದ 25 ವರ್ಷದ ಅಖಿಲಾ ಅಶೋಕನ್, 2016ರಲ್ಲಿ ಜಹನ್ ಎಂಬ ಮುಸ್ಲಿಂ ಯುವಕನನ್ನು ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಳು.
ಹಾದಿಯಾಳ ತಂದೆ ಕೆ.ಎಂ.ಅಶೋಕನ್, ತನ್ನ ಮಗಳು ಲವ್ ಜಿಹಾದ್ ಗೆ ಬಲಿಯಾದಳು ಎಂದು ಆರೋಪಿಸಿ ಕೋರ್ಟ್ ಮೊರೆ ಹೋಗಿದ್ದರು. ಇದು ದೇಶಾದ್ಯಂತ ಸುದ್ದಿಯಾಗಿತ್ತು.

ಕಳೆದ ವರ್ಷ ಮೇ ತಿಂಗಳಲ್ಲಿ ಕೇರಳ ಹೈಕೋರ್ಟ್ ಹಾದಿಯಾಳ ಮದುವೆಯನ್ನು ಅಸಿಂಧುಗೊಳಿಸಿತ್ತು. ದಾರಿ ತಪ್ಪಿಸುವ ರೀತಿಯಲ್ಲಿ ಉಪದೇಶ ಮತ್ತು ಮಾನಸಿಕ ಕಿರುಕುಳ ನೀಡಿ ಹಾದಿಯಾಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ನೀಡಿದ್ದ ವರದಿ ಮೇರೆಗೆ ಹೈಕೋರ್ಟ್ ಈ ಆದೇಶ ನೀಡಿತ್ತು.

ಕೋರ್ಟ್ ಹಾದಿಯಾಳನ್ನು ಪೋಷಕರ ಕಸ್ಟಡಿಗೊಪ್ಪಿಸಿತ್ತು. ಇದನ್ನು ಪ್ರಶ್ನಿಸಿ ಹಾದಿಯಾ ಪತಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹಾದಿಯಾ ಮದುವೆಯನ್ನು ಕಳೆದ ವಾರ ಸಿಂಧುಗೊಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com