ಕಾಶ್ಮೀರ: ಶ್ರೀನಗರ ಕೇಂದ್ರ ಕಾರಾಗೃಹ ಮೇಲೆ ಎನ್ಐಎ ದಾಳಿ; ಪಾಕ್ ಧ್ವಜ, ಜಿಹಾದಿ ವಸ್ತುಗಳು ವಶ

ರಾಷ್ಟ್ರೀಯ ತನಿಖಾ ಸಂಸ್ಥೆ ಕಾಶ್ಮೀರದ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಎರಡು ಡಜನ್ ಗೂ ...
ಶ್ರೀನಗರ ಕೇಂದ್ರ ಕಾರಾಗೃಹ
ಶ್ರೀನಗರ ಕೇಂದ್ರ ಕಾರಾಗೃಹ

ಶ್ರೀನಗರ: ರಾಷ್ಟ್ರೀಯ ತನಿಖಾ ಸಂಸ್ಥೆ ಕಾಶ್ಮೀರದ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಎರಡು ಡಜನ್ ಗೂ ಅಧಿಕ ಮೊಬೈಲ್ ಫೋನ್ ಗಳು, ಜಿಹಾದಿ ಸಾಹಿತ್ಯ ಪುಸ್ತಕಗಳು, ಪಾಕಿಸ್ತಾನ ಧ್ವಜ ಮತ್ತು ಹಾರ್ಡ್ ವೇರ್ ಡಾಟಾಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಕೇಂದ್ರ ತನಿಖಾ ಸಂಸ್ಥಯ 20ಕ್ಕೂ ಹೆಚ್ಚು ತಂಡ ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೊಗಳು ಮತ್ತು ಡ್ರೋನ್ ಗಳು ಜೈಲಿನ ಮೇಲೆ ದಾಳಿ ನಡೆಸಿ ಬ್ಯಾರಕ್ಸ್ ಮತ್ತು ತೆರೆದ ಮೈದಾನವನ್ನು ತೀವ್ರ ಶೋಧ ನಡೆಸಿ ಅಲ್ಲಿ ಬಂಧಿಯಾಗಿರುವ ಕೆಲವು ಭಯೋತ್ಪಾದಕರ ಕೊಠಡಿಗಳನ್ನು ಶೋಧಿಸಿದ್ದಾರೆ. ಇಲ್ಲಿ ಕೆಲವು ಪಾಕಿಸ್ತಾನದ ಭಯೋತ್ಪಾದಕರು ಕೂಡ ಇದ್ದಾರೆ.

ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಇಬ್ಬರು ಯುವಕರಾದ ದನಿಶ್ ಗುಲಮ್ ಲೊನ್ ಮತ್ತು ಸೊಹೈಲ್ ಅಹ್ಮದ್ ಭಟ್ ಅವರ ಬಂಧನದ ಹಿನ್ನೆಲೆಯಲ್ಲಿ ಈ ತನಿಖೆ ನಡೆಯಿತು ಎಂದು ಭದ್ರತಾ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ನಿಷೇಧಿತ ಭಯೋತ್ಪಾದಕ ಸಂಸ್ಥೆಯಾದ ಅಲ್-ಬದ್ರ್ ನಿಂದ ನೇಮಕಾತಿಗೊಂಡ ಯುವಕರು ಇವರಾಗಿದ್ದು ಶ್ರೀನಗದ ಕೇಂದ್ರ ಕಾರಾಗೃಹದೊಳಗೆ ಯುವಕರಿಗೆ ಅಕ್ರಮವಾಗಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿ ಭದ್ರತಾ ಸಂಸ್ಥೆಗೆ ತಿಳಿಯಿತು.

ಇಂದು ಬೆಳಗ್ಗೆಯಿಂದಲೇ ಆರಂಭಗೊಂಡ ಶೋಧ ಕಾರ್ಯಾಚರಣೆ ಅಪರಾಹ್ನದವರೆಗೂ ಮುಂದುವರಿಯಿತು. ಡ್ರೋನ್ ಕ್ಯಾಮರಾ ಸಹಾಯದಿಂದ ಇಡೀ ಶೋಧ ಕಾರ್ಯಾಚರಣೆಯನ್ನು ಗಮನಿಸಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com