ಡೊಕ್ಲಾಂ ವಿವಾದ: ದ್ವಿಪಕ್ಷೀಯ ಮಾತುಕತೆಗಾಗಿ ಚೀನಾಗೆ ತೆರಳಲಿರುವ ಸುಷ್ಮಾ ಸ್ವರಾಜ್

ಡೊಕ್ಲಾಂ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಚೀನಾಗೆ ಭೇಟಿ ನೀಡುತ್ತಿದ್ದು, ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಪಾಲ್ಗೊಳ್ಳಲ್ಲಿದ್ದಾರೆ.
ನವದೆಹಲಿ: ಡೊಕ್ಲಾಂ ವಿವಾದದ  ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಚೀನಾಗೆ ಭೇಟಿ ನೀಡುತ್ತಿದ್ದು, ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಪಾಲ್ಗೊಳ್ಳಲ್ಲಿದ್ದಾರೆ.
ಮೂಲಗಳ ಪ್ರಕಾರ ಇದೇ ತಿಂಗಳ 28ರಂದು ಸುಷ್ಮಾ ಸ್ವರಾಜ್ ಅವರು ಜಪಾನ್ ಪ್ರವಾಸ ಕೈಗೊಳ್ಳಲ್ಲಿದ್ದು, ಬಳಿಕ ಅಮೆರಿಕಕ್ಕೆ ತೆರಳಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಸುಷ್ಮಾ ಸ್ವರಾಜ್ ಅವರಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾಥ್ ನೀಡಿಲಿದ್ದು, ಏಪ್ರಿಲ್ 18ರಂದು ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದಂತೆ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. 
ಬಳಿಕ ಏಪ್ರಿಲ್ 23 ಮತ್ತು 24ರಂದು ಸುಷ್ಮಾ ಸ್ವರಾಜ್ ಮತ್ತು ನಿರ್ಮಲಾ ಸೀತಾರಾಮನ್ ಅವರು ಚೀನಾಗೆ ತೆರಳಲ್ಲಿದ್ದು, ಚೀನಾದ ಶಾಂಘೈನಲ್ಲಿ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಇದೇ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಕೂಡ ಭಾಗಿಯಾಗಲಿದ್ದಾರೆ.  ಚೀನಾ ಭೇಟಿ ವೇಳೆ ಚೀನಾದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಚೀನಾ ವಿದೇಶಾಂಗ ಕಾರ್ಯದರ್ಶಿ ವಾಂಗ್ ಯಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಭೇಟಿ ವೇಳೆ ಉಭಯ ನಾಯಕರು ಕಳೆದ ವರ್ಷ ಸಂಭವಿಸಿದ ಡೊಕ್ಲಾಂ ವಿವಾದ ಸಂಬಂಧ ಚರ್ಚೆ ನಡೆಸಲಿದ್ದು, ಬಳಿಕ ರಷ್ಯಾ, ಭಾರತ, ಚೀನಾ ತ್ರಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಭೇಟಿಯಲ್ಲೇ ಸುಷ್ಮಾ ಸ್ವರಾಜ್ ಅವರು, ಪಾಕಿಸ್ತಾನಿ ವಿದೇಶಾಂಗ ಸಚಿವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com