ಗೋವಾ ಮಾಜಿ ಸಚಿವರ ರಾದ್ದಾಂತ; ಬೀಚ್ ನಲ್ಲಿ ಕಾರು ಓಡಾಡಿಸಿ ವ್ಯಕ್ತಿಗೆ ನಿಂದನೆ

ಗೋವಾದ ಮಾಜಿ ಪ್ರವಾಸೋದ್ಯಮ ಸಚಿವ ಫ್ರಾನ್ಸಿಸ್ಕೊ ಮಿಕ್ಕಿ ಪ್ಯಾಚೆಕೊ ದಕ್ಷಿಣ ಗೋವಾದ ಬೀಚ್ ....
ಗೋವಾ ಮಾಜಿ ಸಚಿವ ಫ್ರಾನ್ಸಿಸ್ಕೊ ಮಿಕ್ಕಿ ಪ್ಯಾಚೆಕೊ
ಗೋವಾ ಮಾಜಿ ಸಚಿವ ಫ್ರಾನ್ಸಿಸ್ಕೊ ಮಿಕ್ಕಿ ಪ್ಯಾಚೆಕೊ

ಪಣಜಿ: ಗೋವಾದ ಮಾಜಿ ಪ್ರವಾಸೋದ್ಯಮ ಸಚಿವ ಫ್ರಾನ್ಸಿಸ್ಕೊ ಮಿಕ್ಕಿ ಪ್ಯಾಚೆಕೊ ದಕ್ಷಿಣ ಗೋವಾದ ಬೀಚ್ ವೊಂದರಲ್ಲಿ ವ್ಯಕ್ತಿಯೊಬ್ಬನನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡುತ್ತಿರುವ ವಿಡಿಯೊ ಇದೀಗ ವೈರಲ್ ಆಗಿದೆ.

ಮೆಲ್ರೊಯ್ ಡಿ ಸೋಜ ಎಂಬ ವ್ಯಕ್ತಿಯನ್ನು ನಿಂದಿಸಿರುವುದನ್ನು ನಿರಾಕರಿಸಿರುವ ಫ್ರಾನ್ಸಿಸ್ಕೊ, ಡಿಸೋಜ ಪೋರ್ಚುಗಲ್ ನ ಪ್ರಜೆಯಾಗಿದ್ದು ತಮ್ಮ ರಾಜಕೀಯ ವೈರಿಯಾಗಿದ್ದು ಜೀಪಿನಲ್ಲಿ ತಮ್ಮ ಕಾರನ್ನು ಬೆನ್ನಟ್ಟಿಕೊಂಡು ಬಂದರು ಎಂದು ಆರೋಪಿಸಿದ್ದಾರೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಇದನ್ನು ನಿರಾಕರಿಸಿರುವ ಡಿಸೋಜ, ಪ್ಯಾಚೆಕೊ ತಮಗೆ ಬೆದರಿಕೆಯೊಡ್ಡಿ ತಮ್ಮ ಕಾರನ್ನು ನನ್ನ ಮೇಲೆ ಹರಿಸಲು ಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.

ವಿಡಿಯೊದಲ್ಲಿ ಮಾಜಿ ಸಚಿವ ಪ್ಯಾಚೆಕೊ ಸಮುದ್ರ ತೀರದಲ್ಲಿ ತನ್ನ ಸ್ನೇಹಿತರ ಜೊತೆಗೆ ಕುಳಿತುಕೊಂಡು ಡಿಸೋಜಕ್ಕೆ ಅವಹೇಳನ ಮಾಡುತ್ತಿರುವುದು ಕಂಡುಬರುತ್ತದೆ. ಐದು ನಿಮಿಷಗಳ ವಿಡಿಯೊ ಕ್ಲಿಪ್ ನಲ್ಲಿ ಸಮುದ್ರ ತೀರದಲ್ಲಿ ಪ್ಯಾಚೆಕೊ ಅವರ ಕಾರು ಸಹ ನಿಂತುಕೊಂಡಿದೆ.

ಮೆಲ್ರೊಯ್ ಡಿ ಸೋಜ ನನ್ನ ಕಾರನ್ನು ಹಿಂದಿನಿಂದ ಜೀಪಿನಲ್ಲಿ ಅಟ್ಟುತ್ತಾ ಬಂದಾಗ ನನಗೆ ಸಿಟ್ಟು ಬಂತು. ನನ್ನನ್ನು ಸಮುದ್ರ ತೀರದವರೆಗೆ ಬೆನ್ನಟ್ಟಿಕೊಂಡು ಬಂದನು ಎಂದು ಪ್ಯಾಚೆಕೊ ಮರ್ಗವೊದಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ. ಡಿಸೋಜ ಕೂಡ ತಮ್ಮ ಮೇಲೆ ನಿಂದನೆಯ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಗೋವಾ ವಿಕಾಸ್ ಪಕ್ಷದ ಶಾಸಕ ಪ್ಯಾಚೆಕೊ ಆಗಿದ್ದು 2015ರಲ್ಲಿ ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರನಿಗೆ ಹೊಡೆದ ಕಾರಣ ಆರು ತಿಂಗಳು ಜೈಲುಪಾಲಾಗಬೇಕಾಯಿತು ಮತ್ತು ಪ್ರವಾಸೋದ್ಯಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com