ಪಿಎನ್'ಬಿ ಹಗರಣ: ತಮ್ಮ ವಕೀಲರ ಪುತ್ರಿ ರಕ್ಷಿಸಲು ಜೇಟ್ಲಿ ಮೌನವಹಿಸಿದ್ದಾರೆ- ರಾಹುಲ್ ಗಾಂಧಿ

ದೇಶದ ಅತೀದೊಡ್ಡ ಬ್ಯಾಂಕಿಂಗ್ ಹಗರಣವೆಂದೇ ಹೇಳಲಾಗುತ್ತಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಕುರಿತಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಮೌನ ಪ್ರಶ್ನೆ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ವಕೀಲರ ಪುತ್ರಿ ರಕ್ಷಿಸಲು ಜೇಟ್ಲಿ ಮೌನವಾಗಿದ್ದಾರೆಂದು...
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ದೇಶದ ಅತೀದೊಡ್ಡ ಬ್ಯಾಂಕಿಂಗ್ ಹಗರಣವೆಂದೇ ಹೇಳಲಾಗುತ್ತಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಕುರಿತಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಮೌನ ಪ್ರಶ್ನೆ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ವಕೀಲರ ಪುತ್ರಿ ರಕ್ಷಿಸಲು ಜೇಟ್ಲಿ ಮೌನವಾಗಿದ್ದಾರೆಂದು ಸೋಮವಾರ ಆರೋಪ ಮಾಡಿದ್ದಾರೆ. 
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಪಿಎನ್ ಬಿ ಹಗರಣದ ಕುರಿತು ಹಣಕಾಸು ಸಚಿವರೇಕೆ ಮೌನವಾಗಿದ್ದಾರೆನ್ನುವುದು ಇದೀಗ ಬಹಿರಂಗಗೊಂಡಿದೆ. ಜೇಟ್ಲಿಯವರು ತಮ್ಮ ವಕೀಲರ ಮಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಹಗರಣ ಸಂಬಂಧ ಇತರೆ ಕಾನೂನು ಸಂಸ್ಥೆಯ ಮೇಲೆ ಸಿಬಿಐ ದಾಳಿ ಮಾಡುತ್ತಿದೆ. ಆದರೆ, ಜೇಟ್ಲಿ ಪುತ್ರಿಯ ಸಂಸ್ಥೆಯ ಮೇಲೆ ಏಕೆ ದಾಳಿಯಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. 
ಅಲ್ಲದೆ. ತಮ್ಮ ಟ್ವೀಟ್ ನೊಂದಿಗೆ 'ದಿ ವೈರ್' ಪ್ರಕಟಿಸಿರುವ ವರದಿಯನ್ನೂ ರಾಹುಲ್ ಗಾಂಧಿಯವರು ಶೇರ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com