ಬ್ಯಾಂಕ್ ಖಾತೆ, ಮೊಬೈಲ್ ಗಳಿಗೆ ಆಧಾರ್ ಜೋಡಣಾ ಕಾಲಮಿತಿ ಅನಿರ್ದಿಷ್ಠಾವಧಿಗೆ ವಿಸ್ತರಣೆ: ಸುಪ್ರೀಂ ಕೋರ್ಟ್

ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಅವಧಿಯನ್ನು ಸುಪ್ರೀಂ ಕೋರ್ಟ್ ಅನಿರ್ದಿಷ್ಠಾವಧಿಗೆ ಮುಂದೂಡಿದೆ.
ಬ್ಯಾಂಕ್ ಖಾತೆ, ಮೊಬೈಲ್ ಗಳಿಗೆ ಆಧಾರ್ ಜೋಡಣಾ ಕಾಲಮಿತಿ ಅನಿರ್ದಿಷ್ಠಾವಧಿಗೆ ವಿಸ್ತರಣೆ: ಸುಪ್ರೀಂ ಕೋರ್ಟ್
ಬ್ಯಾಂಕ್ ಖಾತೆ, ಮೊಬೈಲ್ ಗಳಿಗೆ ಆಧಾರ್ ಜೋಡಣಾ ಕಾಲಮಿತಿ ಅನಿರ್ದಿಷ್ಠಾವಧಿಗೆ ವಿಸ್ತರಣೆ: ಸುಪ್ರೀಂ ಕೋರ್ಟ್
ನವದೆಹಲಿ: ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಅವಧಿಯನ್ನು ಸುಪ್ರೀಂ ಕೋರ್ಟ್ ಅನಿರ್ದಿಷ್ಠಾವಧಿಗೆ ಮುಂದೂಡಿದೆ.
ಆಧಾರ್ ಗುರುತು ಚೀಟಿಯ ಸಾಂವಿಧಾನಿಕ ಸಿಂಧುತ್ವದ ಕುರಿತಂತೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡುವವರೆಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯಲ್ಲ, ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳಿಗೆ  ಆಧಾರ್ ಜೋಡಣೆಗೆ ಸಂಬಂಧ ಇದ್ದ ಮಾ.31ರ ಅಂತಿಮ ಗಡುವನ್ನು ಅನಿರ್ದಿಷ್ಠಾವಧಿಗೆ ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರಿದ್ದ ಸಾಂವಿಧಾನಿಕ ಪೀಠವು ಆಧಾರ್ ಕಡ್ಡಾಯಕ್ಕಾಗಿ ಸರ್ಕಾರ ಒತ್ತಾಯಪಡಿಸುವಂತಿಲ್ಲ ಎಂದು ತಿಳಿಸಿದೆ.
ನ್ಯಾಯಾಲಯದಲ್ಲಿ ಆಧಾರ್ ಸಂಬಂಧದ ಪಿಐಎಲ್ ಕುರಿತಂತೆ ತೀರ್ಪು ಬಂದ ಬಳಿಕ ಚುನಾವಣಾ ಆಯೋಗವು ಮತದಾರರ ಗುರುತಿನ ಚೀಟಿಯೊಡನೆ ಆಧಾರ್ ಜೋಡಣೆಯನ್ನು ಪ್ರಾರಂಭಿಸಲಿದೆ ಎಂದು  ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಮಾ.11ರಂದು ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com