
ಮುಂಬೈ: ಸಮಾಜವಾದಿ ಪಕ್ಷದ ನರೇಶ್ ಅಗರ್ ವಾಲ್ ಬಿಜೆಪಿ ಸೇರಿಕೊಂಡಿದ್ದೇ ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹಿನ್ನೆಡೆಗೆ ಕಾರಣ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.
ಸಮಾಜವಾದಿ - ಎಸ್ಪಿ ಮೈತ್ರಿಯನ್ನು ಪರಿಗಣಿಸುವುದಿಲ್ಲ. ರಾಮನನ್ನೇ ಟೀಕಿಸಿದ್ದ ಸಮಾಜವಾದಿ ನಾಯಕನನ್ನು ಕೆಂಪು ಹಾಸಿಗೆ ಬರಮಾಡಿಕೊಂಡಿದ್ದ ಬಿಜೆಪಿ ವಿರುದ್ಧ ರಾಮ ಆಕ್ರೋಶಗೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ ತವರು ಕ್ಷೇತ್ರದಲ್ಲಿಯೇ ಬಿಜೆಪಿಗೆ ಭಾರೀ ಹಿನ್ನೆಡೆಯುಂಟಾಗಿದೆ. ಗೋರಖ್ ಪುರ ಹಾಗೂ ಪುಲ್ಪುರ್ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಎದುರು ಸಮಾಜವಾದಿ ಅಭ್ಯರ್ಥಿಗಳು ಭಾರೀ ಅಂತರದಿಂದ ಜಯಗಳಿಸಿದ್ದಾರೆ.
ಮಾರ್ಚ್ 11 ರಂದು ಈ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಜಯಾಬಚ್ಚನ್ ರಾಜ್ಯಸಭೆಗೆ ಪುನ: ನಾಮಪತ್ರ ಸಲ್ಲಿಸಿದ್ದ ನಂತರ ನರೇಶ್ ಅಗರ್ ವಾಲ್ ಸಮಾಜವಾದಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
Advertisement