ಅಖಿಲೇಶ್ ಯಾದವ್, ಮಾಯಾವತಿಗೆ ಗೆಲುವಿನ ಶ್ರೇಯಸ್ಸು - ವಿಜೇತ ಅಭ್ಯರ್ಥಿ

ಫಲ್ಪುರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ನಾಗೇಂದ್ರ ಸಿಂಗ್ ಪಾಟೀಲ್ 60 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ನಾಗೇಂದ್ರಸಿಂಗ್ ಪಾಟೀಲ್
ನಾಗೇಂದ್ರಸಿಂಗ್ ಪಾಟೀಲ್
Updated on

ಉತ್ತರ ಪ್ರದೇಶ : ಫಲ್ಪುರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ  ಸಮಾಜವಾದಿ ಪಕ್ಷದ ಅಭ್ಯರ್ಥಿ ನಾಗೇಂದ್ರ  ಸಿಂಗ್ ಪಾಟೀಲ್  60 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ತೀವ್ರ ಕುತೂಹಲ ಮೂಡಿಸಿದ್ದ ಈ ಕ್ಷೇತ್ರದಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ನಾಗೇಂದ್ರ ಪಾಟೀಲ್ ಸಿಂಗ್  ತನ್ನ ಸಮೀಪದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.

ಸಮಾಜವಾದಿ ಪಕ್ಷದ ಮಾಜಿ ಮುಖ್ಯಮಂತ್ರಿ ಅಖಿಲೇಖ್ ಯಾದವ್ ಹಾಗೂ  ಬಿಎಸ್ಪಿಯ  ಅಧಿನಾಯಕಿ ಮಾಯಾವತಿ ಅವರ ಆಶೀರ್ವಾದದಿಂದ ಈ ಗೆಲುವು ಸಾಧಿಸಿದ್ದು, ಎಲ್ಲ ಶ್ರೇಯಸ್ಸು ಅವರಿಗೆ ಸಲ್ಲಬೇಕೆಂದು ಅವರು ತಿಳಿಸಿದ್ದಾರೆ.

ಸಮಾನ ಮನಸ್ಕ ಪಕ್ಷಗಳ ಮೈತ್ರಿಯಿಂದಾಗಿ ಈ ವಿಜಯ ಸಾಧಿಸಲಾಗಿದ್ದು , ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಹಾಗೂ ಕ್ಷೇತ್ರದ ಜನತೆಗೆ  ಕೃತಜ್ಞತೆ ಸಲ್ಲಿಸುವುದಾಗಿ  ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳು ಫಲ್ಪುರ್ ಹಾಗೂ ಗೋರಖ್ ಪುರ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದಾರೆ.


 


ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com