ಏರ್ ಇಂಡಿಯಾ ಟ್ವಿಟ್ಟರ್ ಖಾತೆಗೆ ಟರ್ಕಿ ಸೈಬರ್ ಆರ್ಮಿ ಕನ್ನ, ಟರ್ಕಿ ಪರ ಸಂದೇಶ ಹಾಕಿದ ಹ್ಯಾಕರ್ ಗಳು

ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಅಧಿಕೃತ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಅಧಿಕೃತ ಟ್ವಿಟ್ಟರ್ ಖಾತೆ  ಹ್ಯಾಕ್ ಆಗಿದೆ. ಹ್ಯಾಕರ್ ಗಳು ಏರ್ ಇಂಡಿಯಾದ ಖಾತೆಯಲ್ಲಿ ಟರ್ಕಿ ಭಾಷೆಯ ಸಂದೇಶಗಳನ್ನು ಪೋಸ್ಟ್ ಮಾಡಿದ್ದು ಇದರಲ್ಲಿ ವಿಮಾನ ರದ್ದತಿ ಪ್ರಕಟಣೆಗಳೂ ಸೇರಿದೆ.
ಹ್ಯಾಕರ್ ಗಳು ಏರ್ ಇಂಡಿಯಾ ಟ್ವಿಟ್ಟರ್ ಖಾತೆಯನ್ನು @airindiainದಿಂದ @airindiaTR. ಎಂದು ಬದಲಿದ್ದಾರೆ.
"ಕಡೆ ಕ್ಷಣದ ಪ್ರಮುಖ ಪ್ರಕಟಣೆ, ನಮ್ಮ ಎಲ್ಲಾ ವಿಮಾನಗಳೂ ಈ ಕ್ಷಣದಿಂಡ ರದ್ದಾಗಿದೆ. ಇನ್ನು ಮುಂದಿನ ದಿನದಲ್ಲಿ ನಾವು ಟರ್ಕಿ ಏರ್ ಲೈನ್ಸ್ ಸಹಯೋಗದಲ್ಲಿ ಮುನ್ನಡೆಯುತ್ತೇವೆ" ಏರ್ ಇಂಡಿಯಾದ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿದ ಹ್ಯಾಕರ್ ಗಳು ಸಂದೇಶ ಹಾಕಿದ್ದಾರೆ. 
ಕೆಲ ಕಾಲದ ಬಳಿಕ ಏರಿ ಇಂಡಿಯಾ ಅಧಿಕಾರಿಗಳು ತಮ್ಮ ಮೂಲ ಟ್ವಿಟ್ಟರ್ ಖಾತೆಯನ್ನು ಪುನರಾರಂಭಿಸಿದ್ದಾರೆ. ಇದೇ ವೇಳೆ ಹ್ಯಾಕರ್ ಗಳು  ಟರ್ಕಿ ಸೈಬರ್ ಆರ್ಮಿ ಆಯ್ಯಿಲ್‌ಡಿಜ್ ಟಿಮ್ ಗೆ ಸೇರಿದವರೆನ್ನುವುದು ಪತ್ತೆಯಾಗಿದೆ.
ಏರ್ ಇಂಡಿಯಾ ಟ್ವಿಟ್ಟರ್ ಕಾತೆಯು 1,46,000 ಫಾಲೋವರ್ಸ್ ಗಳನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com