ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ವೈಎಸ್ ಆರ್ ಕಾಂಗ್ರೆಸ್ ನೋಟಿಸ್

ಮೋದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ನೋಟಿಸ್ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಕಾರಾ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಮೋದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ನೋಟಿಸ್ ನೀಡಿದೆ.
ಮೂಲಗಳ  ಪ್ರಕಾರ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸಂಸದ ವೈ ವಿ ಸುಬ್ಬಾ ರೆಡ್ಡಿ ಅವರು ಲೋಕಸಭಾ ಕಾರ್ಯದರ್ಶಿಗಳಿಗೆ ನಾಳೆ ಬೆಳಗ್ಗೆ ನೋಟಿಸ್ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ವೈಎಸ್ ಆರ್ ಕಾಂಗ್ರೆಸ್ ಪಕ್ಷ ನೀಡಲು ಮುಂದಾಗಿರುವ ನೋಟಿಸ್ ಗೆ ಕನಿಷ್ಠ 50 ಸಂಸದರ ಬೆಂಬಲ ವಿದ್ದರೆ ಮಾತ್ರ ಅದು ಅನುಮೋದನೆಯಾಗಲಿದೆ. ಇನ್ನು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಬಳಿ ಒಟ್ಟು 9 ಸಂಸದರಿದ್ದು, ಇದೇ ಕಾರಣಕ್ಕೆ ಜಗನ್ ಮೋಹನ್ ರೆಡ್ಡಿ ಅವರು ಆಂಧ್ರ ಪ್ರದೇಶದ ವಿವಿಧ ಪಕ್ಷಗಳಿಗೆ ಪತ್ರ ಬರೆದಿದ್ದು ನೋಟಿಸ್ ಗೆ ಬೆಂಬಲ ನೀಡುವಂತೆ ಕೋರಿದ್ದಾರೆ.
ಮೂಲಗಳ ಪ್ರಕಾರ ಟಿಡಿಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಿಗೆ ಜಗನ್ ಪತ್ರ ಬರೆದಿದ್ದು, ಈ ಪೈಕಿ  ಎನ್ ಡಿಎ ಮೈತ್ರಿಕೂಟಜದಲ್ಲಿ ಗುರುತಿಸಿಕೊಂಡಿದ್ದ ಟಿಡಿಪಿ ಇದೀಗ ಜಗನ್ ನೋಟಿಸ್ ಗೆ ಬೆಂಬಲ ನೀಡಲು ಸಿದ್ಧ ಎಂದು ಘೋಷಿಸಿದೆ. ಪತ್ರದಲ್ಲಿ ಆಂಧ್ರ ಪ್ರದೇಶದ ಸಂಸದರನ್ನು ಉದ್ದೇಶಿಸಿ ಬರೆದಿರುವ ಜಗನ್, ಒಂದು ವೇಳೆ ಕೇಂದ್ರ ಸರ್ಕಾರ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಹಿಂದೇಟು ಹಾಕಿದರೆ ಆಂಧ್ರ ಪ್ರದೇಶದ ಎಲ್ಲ ಸಂಸದರು ರಾಜಿನಾಮೆ ನೀಡೋಣ. ಇದರ ಮೊದಲ ಭಾಗವಾಗಿ ಇದೇ ಏಪ್ರಿಲ್ 6 ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಎಲ್ಲ 9 ಸಂಸದರು ರಾಜಿನಾಮೆ ನೀಡಲಿದ್ದಾರೆ ಎಂದು ಘೋಷಿಸಿದ್ದಾರೆ. 
ಒಂದು ವೇಳೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ನೋಟಿಸ್ ಗೆ 50ಕ್ಕೂ ಹೆಚ್ಚು ಸಂಸದರ ಬೆಂಬಲ ದೊರೆತಿದ್ದೇ ಆದರೆ ಆಗ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ. ಇನ್ನು ಇದೇ ವಿಚಾರವಾಗಿ ಈ ಹಿಂದೆ ಟಿಡಿಪಿ ಕೂಡ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿತ್ತು. ಕೇಂದ್ರಸರ್ಕಾರದಲ್ಲಿ ಸಚಿವರಾಗಿದ್ದ ತನ್ನ ಇಬ್ಬರು ಸಂಸದರನ್ನು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಹೇಳಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು. ಆಗ ಎಚ್ಚೆತ್ತಿದ್ದ ಮೋದಿ ಸರ್ಕಾರ ಆಂಧ್ರ ಪ್ರದೇಶಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. 
ಆದರೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನಿಲುವನ್ನು ಖಂಡಿಸಿದ್ದ ಆಂಧ್ರ ಪ್ರದೇಶ ಸಂಸದರು ಸಂಸತ್ ನ ಉಭಯ ಕಲಾಪಗಳಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com