ದೇಶದ ಆರ್ಥಿಕತೆಯಲ್ಲಿ ಗ್ರಾಹಕರು ಪ್ರಮುಖ ಪಾತ್ರ ವಹಿಸುತ್ತಾರೆ: ಪ್ರಧಾನಿ ಮೋದಿ

ವಿಶ್ವ ಗ್ರಾಹಕ ಹಕ್ಕು ದಿನಾಚರಣೆ ಹಿನ್ನಲೆಯಲ್ಲಿ ಜನತೆಗೆ ಶುಭಾಶಯಗಳನ್ನು ಕೋರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ದೇಶದ ಆರ್ಥಿಕತೆಯಲ್ಲಿ ಗ್ರಾಹಕರ ಪಾತ್ರ ಪ್ರಮುಖವಾದದ್ದು ಎಂದು ಗುರುವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ವಿಶ್ವ ಗ್ರಾಹಕ ಹಕ್ಕು ದಿನಾಚರಣೆ ಹಿನ್ನಲೆಯಲ್ಲಿ ಜನತೆಗೆ ಶುಭಾಶಯಗಳನ್ನು ಕೋರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ದೇಶದ ಆರ್ಥಿಕತೆಯಲ್ಲಿ ಗ್ರಾಹಕರ ಪಾತ್ರ ಪ್ರಮುಖವಾದದ್ದು ಎಂದು ಗುರುವಾರ ಹೇಳಿದ್ದಾರೆ. 
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಜನತೆಗೆ ವಿಶ್ವ ಗ್ರಾಹಕ ಹಕ್ಕು ದಿನಾಚರಣೆಯ ಶುಭಾಶಯಗಳು. ದೇಶದ ಆರ್ಥಿಕತೆಯಲ್ಲಿ ಗ್ರಾಹಕರ ಪಾತ್ರ ಅತ್ಯಂತ ಪ್ರಮುಖವಾದದ್ದು. ಭಾರತ ಸರ್ಕಾರ ಗ್ರಾಹಕರ ರಕ್ಷಣೆ ಮಾತ್ರವಲ್ಲದೆ, ಗ್ರಾಹಕರ ಸಮೃದ್ಧಿಯತ್ತ ಕೂಡ ಗಮನ ಹರಿಸುತ್ತಿದೆ ಎಂದು ಹೇಳಿದ್ದಾರೆ. 
ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತೀ ವರ್ಷ ಮಾರ್ಚ್ 15 ರಂದು ವಿಶ್ವ ಗ್ರಾಹಕ ಹಕ್ಕು ದಿನವನ್ನು ಆಚರಿಸಲಾಗುತ್ತದೆ. ಗ್ರಾಹಕರ ಮೂಲಭೂತ ಹಕ್ಕುಗಳನ್ನು ಪ್ರಚುರಪಡಿಸಲು, ಗ್ರಾಹಕರ ಹಕ್ಕುಗಳನ್ನು ಗೌರವಿಸಿ ರಕ್ಷಿಸಲಸು ಈ ದಿನವನ್ನು ಆಚರಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮೋಸ ಮಾಡುವುದು ಮತ್ತು ಸಾಮಾಜಿಕ ಅಸಮಾನತೆಯನ್ನು ತಡೆಯಲು ಈ ದಿನ ಸಾರ್ವಜನಿಕರಲ್ಲಿ ಅರಿವೂ ಮೂಡಿಸುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com