ಪಕ್ಷಕ್ಕೆ ಅಂಟುಕೊಂಡಿದ್ದ ಶನಿ ಬಿಟ್ಟು ಹೋಗಿದೆ: ದಿನಕರನ್ ಕುರಿತು ಎಐಎಡಿಎಂಕೆ ಶಾಸಕ ಹೇಳಿಕೆ

ಪಕ್ಷಕ್ಕೆ ಅಂಟುಕೊಂಡಿದ್ದ ಶನಿ ಬಿಟ್ಟು ಹೋಗಿದ್ದು, ದಿನಕರನ್ ನಿರ್ಗಮನ ಉತ್ತಮವಾದ ಬೆಳವಣಿಗೆಯಾಗಿದೆ ಎಂದು ಎಐಎಡಿಎಂಕೆ ಶಾಸಕ ಡಿ.ಜಯಕುಮಾರ್ ಅವರು ಗುರುವಾರ ಹೇಳಿದ್ದಾರೆ...
ಎಐಎಡಿಎಂಕೆ ಶಾಸಕ ಡಿ.ಜಯಕುಮಾರ್
ಎಐಎಡಿಎಂಕೆ ಶಾಸಕ ಡಿ.ಜಯಕುಮಾರ್
Updated on
ಚೆನ್ನೈ: ಪಕ್ಷಕ್ಕೆ ಅಂಟುಕೊಂಡಿದ್ದ ಶನಿ ಬಿಟ್ಟು ಹೋಗಿದ್ದು, ದಿನಕರನ್ ನಿರ್ಗಮನ ಉತ್ತಮವಾದ ಬೆಳವಣಿಗೆಯಾಗಿದೆ ಎಂದು ಎಐಎಡಿಎಂಕೆ ಶಾಸಕ ಡಿ.ಜಯಕುಮಾರ್ ಅವರು ಗುರುವಾರ ಹೇಳಿದ್ದಾರೆ. 
ದಿನಕರನ್ ಹೊಸ ಪಕ್ಷ ಸ್ಥಾಪನೆ ಮಾಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವಅವರು, ಸೊಳ್ಳೆ ಬರುವುದು ಹಾಗೂ ಅದು ಹಾರಿ ಹೋಗುವುದು ಯಾರಿಗೂ ಗೊತ್ತಾಗುವುದಿಲ್ಲ. ಪಕ್ಷದಲ್ಲಿದ್ದ ಶನಿ ಇದೀಗ ಬಿಟ್ಟು ಹೋಗಿದೆ ಎಂದು ಹೇಳಿದ್ದಾರೆ. 
ಎಐಎಡಿಎಂಕೆ ಬಂಡುಕೋರ ನಾಯಕ ಟಿಟಿವಿ ದಿನಕರನ್ ಅವರು, ತಮ್ಮ ಹೊಸ ಪಕ್ಷಕ್ಕೆ 'ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ' ಎಂದು ಹೆಸರಿಟ್ಟಿದ್ದಾರೆ. ಟಿಟಿವಿ ದಿನಕರನ್ ಅವರು ತಮ್ಮ ಹೊಸ ಪಕ್ಷ ಹಾಗೂ ಪಕ್ಷದ ಧ್ವಜವನ್ನು ಇಂದು ಘೋಷಣೆ ಮಾಡಿದ್ದಾರೆ. 
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ನಿಧನ ಹೊಂದಿದ ಬಳಿಕ ತೆರವಾದ ರಾಧಾಕೃಷ್ಣ ನಗರ (ಆರ್.ಕೆ.ನಗರ) ವಿಧಾನಸಭಾ ಕ್ಷೇತ್ರಕ್ಕೆ ಕಳೆದ ವರ್ಷ ಡಿ.21 ರಂದು ಮತದಾನ ನಡೆದಿತ್ತು. ಉಪ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ದಿನಕರನ್ ಅವರು ಗೆಲವು ಸಾಧಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com